ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಎಫ್ಎಸ್ಎಲ್, ಮರಣೋತ್ತರ ಪರೀಕ್ಷೆಗಳು ಕೃತ್ಯಕ್ಕೆ ಸಾಕ್ಷ್ಯ ಹೇಳುತ್ತಿವೆ. ಕಳೆದೆರಡು ತಿಂಗಳಿನಿಂದ ಪ್ರಕರಣದ ತನಿಖೆ ನಡೆಸ್ತಿರುವ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆಗೂ ತಯಾರಿ ನಡೆಸಿದ್ದಾರೆ. ಈ ಮಧ್ಯೆ ಎ1 ಆರೋಪಿ ಪವಿತ್ರಾ ಗೌಡ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 22ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪರ ಹಿರಿಯ ವಕೀಲ ರೇನಿ ಸೆಬಾಸ್ಟಿಯನ್ ಸಿಸಿಎಚ್ 57ರ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾಗೌಡ ಜೈಲು ಸೇರಿ 72 ದಿನಗಳೇ ಕಳೆದಿವೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿ ಪವಿತ್ರಾಗೌಡ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ.
ಬೇಲ್ ಗಾಗಿ ನ್ಯಾಯಾಧೀಶರ ಮುಂದೆ ಯಾವ ರೀತಿ ವಾದ ಮಾಡಬಹುದು
- ಸಾಮಾನ್ಯವಾಗಿ ಕಾನೂನಿನಲ್ಲಿ ಮಹಿಳೆಯರಿಗೆ ಸ್ಪೆಷಲ್ ಕನ್ಸೆಷನ್ ಇದೆ
- CRPC ಸೆಕ್ಷನ್ 437 ಪ್ರಕಾರ ಸೀರಿಯಸ್ ಅಫೆನ್ಸ್ ಇದ್ದರು ಜಾಮೀನು ನೀಡಲು ಅವಕಾಶವಿದೆ
- ಇದೇ ಸೆಕ್ಷನ್ ಅಡಿ ಬೇಲ್ ನೀಡಿ ಅಂತ ಅರ್ಜಿ ಸಲ್ಲಿಕೆ ಮಾಡಿದ್ದಾರೆ
- ನನ್ನ ಪಾತ್ರವಿಲ್ಲ, ಸುಖಾ-ಸುಮ್ಮನೆ ಕೇಸ್ ನಲ್ಲಿ ಸಿಲುಕಿಸಿದ್ದಾರೆ ಅಂತ ವಾದಿಸಬಹುದು
- ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದನ್ನ ದರ್ಶನ್ ಗಮನಕ್ಕೆ ತಂದಿದ್ದೇನೆ ಅಷ್ಟೇ
- ಆದರೆ ಏನೋ ಅಚಾತುರ್ಯ ಆಗಿ ಹೋಗಿದೆ, ಇದರಲ್ಲಿ ನನ್ನ ಪಾತ್ರ ಏನಿದೆ
- ನನ್ನ ಸ್ಥಾನದಲ್ಲಿ ಯಾವುದೇ ಮಹಿಳೆ ಇದ್ದರೂ ಆತ್ಮೀಯರ ಗಮನಕ್ಕೆ ತರ್ತಾ ಇದ್ರು
- ನಾನು ಈಗಾಗಲೇ ಎರಡು ತಿಂಗಳು ಜೈಲಿನಲ್ಲಿ ಕಳೆದಿದ್ದೇನೆ
- ಆರೋಗ್ಯ ಸಮಸ್ಯೆಯಿದೆ, ಮಾನಸಿಕವಾಗಿ ಕುಗ್ಗಿದ್ದೇನೆ ಅಂತ ವಾದಿಸಬಹುದು
- ವಯಸ್ಸಾದ ತಾಯಿಯ ಆರೈಕೆ ಮಾಡಬೇಕಿದೆ. ಶಾಲೆಗೆ ಹೋಗುವ ಮಗಳ ಜವಬ್ದಾರಿ ನಿರ್ವಹಿಸಬೇಕಿದೆ
- ನಾನು ಎಲ್ಲ ತನಿಖೆಗೂ ನಾನು ಸಹಕರಿಸಿದ್ದೇನೆ
- ಬಿಡುಗಡೆ ಮಾಡಿ ಅಂತ ಕೇಳ್ತಿಲ್ಲ, ಕಾನೂನಾತ್ಮಕವಾಗಿ ಅವಕಾಶವಿದೆ ಬೇಲ್ ಕೊಡಿ ಅಂತ ಮನವಿ ಮಾಡಬಹುದು
ಪವಿತ್ರಾಗೆ ಜೈಲು ಏಕೆ?
ಕಳೆದ ಜೂನ್ 11ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ಜೈಲುಪಾಲಾಗಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ10 ವಿನಯ್, ಎ11 ನಾಗರಾಜ್, ಎ12 ಲಕ್ಷ್ಮಣ್, ಎ13 ದೀಪಕ್, ಎ14 ಪ್ರದೋಶ್, ಎ16 ನಿಖಿಲ್ ಆರೋಪಿಗಳು ಜೈಲು ಪಾಲಾಗಿದ್ದಾರೆ. ಸದ್ಯ ತನಿಖೆಯಲ್ಲಿ 200ಕ್ಕೂ ಅಧಿಕ ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವ ಹಂತದಲ್ಲಿದ್ದಾರೆ.