ಕಾಮಿ ಅಲ್ಲ ವಿಕೃತ ಕ್ರಿಮಿ.. ಪತ್ನಿ ಗರ್ಭಿಣಿಯಾಗಿದ್ದಾಗ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿಸಿದ್ದ ಪಾಪಿ ರಾಯ್!

Share to all

ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಬಂದಿದ್ದ ವೈದ್ಯಯ ಮೇಲೆ ವಿಕೃತ ಕಾಮಿ ನಡೆಸಿದ ಅನಾಚಾರ ಜಾಗತಿಕವಾಗಿ ಸುದ್ದಿ ಪಡೆದುಕೊಂಡಿತ್ತು. ಘಟನೆ ನಡೆದ ಬಳಿಕ ಸಂಜಯ್ ರಾಯ್ ಅನ್ನೋ ಆರೋಪಿಯನ್ನ ಬಂಧಿಸಲಾಗಿತ್ತು. ಅದಾದ ಮೇಲೆ ಪ್ರಕರಣದಲ್ಲಿ ಯಾವುದೇ ಬೆಳವಣಿಗಳು ಕಾಣದಿದ್ದಾಗ ಕೊಲ್ಕೊತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಸದ್ಯ ಈ ಪ್ರಕರಣದ ವಿಚಾರವಾಗಿ ಬೇರೆಯದ್ದೇ ಸುದ್ದಿ ಕೇಳಿ ಬರುತ್ತಿವೆ. ಕಾಮುಕರ ಕೈಯಲ್ಲಿ ಸಿಕ್ಕು ನರಳಿದ ವೈದ್ಯೆಗೆ ಕಾಲೇಜಿಗೆ ಸಂಬಂಧಿಸಿದ ಹಲವು ಸತ್ಯಗಳು ಗೊತ್ತಿದ್ದವಂತೆ.

ಕೋಲ್ಕತ್ತಾ ವೈದ್ಯೆಯನ್ನು ಅತ್ಯಾಚಾರ ಮಾಡಿ, ಹತ್ಯೆ ಮಾಡಿರೋ ಆರೋಪಿ ಸಂಜಯ್‌ ರಾಯ್‌ ಕೂಡ ಒಬ್ಬ ರಾಕ್ಷಸ. ಆತನ ರಕ್ತಚರಿತ್ರೆಯ ಕಥೆಗಳನ್ನು ಕೇಳಿದ್ರೆ ಯಾರೇ ಆದ್ರೂ ಒಂದು ಕ್ಷಣ ಬೆಚ್ಚಿ ಬೀಳ್ತೀರಾ. ಅಷ್ಟಕ್ಕೂ ಆತ ಪೊಲೀಸರ ಬಲೆಯೊಳಗೆ ಸಿಲುಕಿದ್ದು ಹೇಗೆ? ಹೆಣ್ಣು ಬಾಕನ ಇತಿಹಾಸ ಏನು ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಕ್ರಿಮಿ ಸಂಜಯ್‌ ರಾಯ್‌ ಇತಿಹಾಸ ಅಕ್ಷರಶಃ ಬೆಚ್ಚಿ ಬೀಳಿಸುವಂತೆ. ಆತನಿಗೆ ತಾನು ಮಾಡಿದ್ದು ಪಾಪ ಕೃತ್ಯ ಅನ್ನೋ ಕನಿಷ್ಠ ಪಾಪ ಪ್ರಜ್ಞೆಯೂ ಇಲ್ಲ. ಬೇಕಾದ್ರೆ ತನ್ನನ್ನು ಗಲ್ಲಿಗೇರಿಸಿ ಅಂತಾ ಪೊಲೀಸರಿಗೆ ನೇರವಾಗಿ ಹೇಳ್ತಿದ್ದಾನೆ. ಹಾಗೇ ಈತನ ಇತಿಹಾಸವನ್ನು ನೋಡ್ತಾ ಹೋದಾಗ ಕಾಣಿಸೋದ್‌ ಈಗಾಗಲೇ 4 ಮದುವೆಯಾಗಿದ್ದಾನೆ ಅನ್ನೋದು. ಮೊದಲ ಪತ್ನಿ ಜೊತೆ ಅಮಾನುಷವಾಗಿ ನಡೆದುಕೊಳ್ಳುತ್ತಾನೆ. ಅಸಹಜ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸ್ತಾನೆ, ಪೀಡಿಸ್ತಾನೆ.

ಅದ್ರಿಂದ ಬೇಸತ್ತ ಮೊದಲ ಪತ್ನಿ ಈತನಿಂದ ದೂರಾಗುತ್ತಾಳೆ. ಅನಂತರ ಮತ್ತೆ 2 ಮದುವೆ ಮಾಡಿಕೊಳ್ತಾನೆ. ಆ ಎರಡೂ ಪತ್ನಿಯರ ಜೊತೆಗೂ ಅಷ್ಟೇ ಕ್ರೂರವಾಗಿ, ಕಾಮಿ ಕ್ರಿಮಿಯಾಗಿ ನಡೆದುಕೊಳ್ತಾನೆ. ಅವ್ರು ಈ ಪಾಪಿಯಿಂದ ದೂರಾಗ್ತಾರೆ. ಆಮೇಲೆ ಇತ್ತೀಚಿನ ವರ್ಷದಲ್ಲಿ 4ನೇ ಮದುವೆ ಆಗಿರ್ತಾನೆ. ಆದರೆ ಆಕೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿರುತ್ತಾಳೆ. ಅದಾತ್ಮೇಲೆ ಈತನ ಕಣ್ಣು ಕಂಡವರ ಹೆಣ್ಣು ಮಕ್ಕಳ ಮೇಲೆ ಬೀಳಲು ಶುರುವಾಗುತ್ತೆ.

ಅದಲ್ಲದೆ ಸಂಜಯ್ ರಾಯ್ ಪತ್ನಿ ಮೂರು ತಿಂಗಳ ಗಣರ್ಭಿಣಿಯಾಗಿದ್ದಾಗ ಆಕೆಯ ಹೊಟ್ಟೆಗೆ ಒದ್ದು, ಹಲ್ಲೆ ನಡೆಸಿದ ಗರ್ಭಪಾತ ಮಾಡಿಸಿದ್ದ ಎನ್ನುವ ವಿಚಾರವನ್ನು ಅವರು ತಿಳಿಸಿದ್ದಾರೆ. ಆತನನ್ನು ಗಲ್ಲಿಗೇರಿಸುವುದೇ ಸೂಕ್ತ ಎಂದಿರುವ ಅವರು, ತನ್ನ ಮಗಳು ಮತ್ತು ರಾಯ್ ಮದುವೆಯಾಗಿ 2 ವರ್ಷಗಳಾಗಿದ್ದವು, ತನ್ನ ಮಗಳೊಂದಿಗೆ ಆತನ ಮದುವೆ ಎರಡನೇ ಮದುವೆಯಾಗಿತ್ತು. ಆರಂಭದಲ್ಲಿ 6 ತಿಂಗಳು ಎಲ್ಲವೂ ಚೆನ್ನಾಗಿತ್ತು. ಆಕೆ ಗರ್ಭಿಣಿಯಾದಾಗ ಆತ ಮಗಳ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿಸಿದ್ದ, ನಂತರ ಪೊಲೀಸರಿಗೆ ನಾವು ದೂರು ನೀಡಿದ್ದೆವು. ನನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು, ಔಷಧಿ ಸಂಪೂರ್ಣ ಖರ್ಚನ್ನು ತಾನೇ ನೋಡಿಕೊಂಡಿರುವುದಾಗಿ ತಿಳಿಸಿದ್ದಾರೆ.

 


Share to all

You May Also Like

More From Author