ದಾವಣಗೆರೆ:- ಒಂದೆಡೆ ಮಳೆಯ ಆರ್ಭಟ, ಮತ್ತೊಂದೆಡೆ ಕಷ್ಟ ಪಟ್ಟು ಬೆಳೆದ ಟೊಮ್ಯಾಟೊ ನೀರಲ್ಲಿ ಹೋಗುತ್ತಿರುವುದನ್ನು ಕಂಡು ಕಣ್ಣೀರಾಕುತ್ತಿರುವ ರೈತ, ಇವೆಲ್ಲಾ ದೃಶ್ಯ ನೋಡಿದ ನೋಡುಗರಿಗೆ ದುಖಃ ಬರದೇ ಇರದು. ಏನಿದು ರೈತನ ಸ್ಟೋರಿ ಅಂತೀರಾ. ಈ ಸುದ್ದಿ ಓದಿ. ಹೌದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ದಿಢೀರನೆ ಸುರಿದ ಭಾರಿ ಮಳೆಗೆ ಟೊಮೇಟೊ ಹಣ್ಣುಗಳು ಕೊಚ್ಚಿಕೊಂಡು ಹೋದ ಘಟನೆ ಜರುಗಿದೆ.
ಆರುಂಡಿ ಗ್ರಾಮದ ಜವಳಿ ಸುರೇಶ್ ಎಂಬುವರಿಗೆ ಸೇರಿದ ಟೊಮೇಟೊಗಳು ನೀರುಪಾಲಾಗಿದ್ದು ರೈತನಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ನಷ್ಟುವಾಗಿದೆ. ಇನ್ನು ಈ ದೃಶ್ಯವನ್ನು ಕೆಲ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.ಜಮೀನಿನಲ್ಲಿ ಟೊಮೇಟೊ ಬಾಕ್ಸ್ಗೆ ತುಂಬುತ್ತಿದ್ದಾಗ ಭಾರಿ ಮಳೆಯಾಗಿದ್ದು. ಏಕಾಏಕಿ ಒಂದು ಘಂಟೆಗೂ ಹೆಚ್ಚು ಕಾಲ ಮಳೆ ಬಂದಿದೆ. ಇದರಿಂದ ಬಾಕ್ಸ್ ಗೆ ತುಂಬಲು ರಾಶಿ ಹಾಕಿದ್ದ ಟೊಮೇಟೊ ನೀರು ಪಾಲಾಗಿದೆ.