ಬೆಂಗಳೂರು: ಕಳೆದೊಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಈ ರೋಡ್ ರೇಜ್ ಕೇಸ್ಗಳ ಹಾವಳಿ ಜಾಸ್ತಿಯಾಗಿದೆ. ವಾಹನ ಸವಾರರು ಸಣ್ಣಪುಟ್ಟ ವಿಚಾರಕ್ಕೆ ಕಿರಿಕ್ ಮಾಡ್ಕೊಂಡು ಗಲಾಟೆ ಮಾಡ್ಕೋತಿರುವ ಕೇಸ್ಗಳು ಒಂದಾ ಎರಡಾ? ದಿನಕ್ಕೊಂದ್ರಂತೆ ಒಂದಿಲ್ಲೊಂದು ರೋಡ್ ರೇಜ್ ಕೇಸ್ಗಳು ಬೆಳಕಿಗೆ ಬರ್ತಾನೆ ಇದಾವೆ.
ಈ ಫೋಟೋದಲ್ಲಿರುವ ಯುವಕನ ಹೆಸರು ಮಹೇಶ್, ವಯಸ್ಸು ಜಸ್ಟ್ 21 ವರ್ಷ…ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮುಂಡೇಶ್ವರಿ ಲೇಔಟ್ ನ ನಿವಾಸಿ.. ಇದೇ ಮಹೇಶ್ ನಿನ್ನೆ ಸಂಜೆ ಮನೆಯಿಂದ ಬಾಲಾಜಿ ಹಾಗೂ ಲಿಖೀತ್ ಜೊತೆಗೆ ಬೈಕ್ ನಲ್ಲಿ ಟೀ ಕುಡಿಯಲು ಜಿಕೆವಿಕೆ ಲೇಔಟ್ ಬಳಿ ಬಂದಿದ್ದ. ಟೀ ಕುಡಿದು ವಾಪಸ್ ಚಾಮುಂಡೇಶ್ವರಿ ನಗರದ ಕಡೆ ಹೋಗ್ತಿರುವಾಗ 7.30ರ ಸುಮಾರಿಗೆ ಕಾರಿಗೆ ಬೈಕ್ ಟಚ್ ಆಗಿದೆ. ಆಮೇಲೆ ನಡೆದಿದ್ದು ಘೋರ ದುರಂತ
ಬೈಕ್ ಟಚ್ ಆಗ್ತಿದ್ದಂತೆ ವೋಲ್ಸ್ ವ್ಯಾಗನ್ ಕಾರಲ್ಲಿದ್ದ ಅರವಿಂದ್ ಹಾಗೂ ಮಹೇಶ್ ನಡುವೆ ಕಿರಿಕ್ ಆಗಿದೆ . ಬೈಕ್ ನಿಲ್ಲಿಸದೆ ಮಹೇಶ್ ಹೋಗಿದ್ದಾನೆ. ಆಗ ರೊಚ್ಚಿಗೆದ್ದ ಅರವಿಂದ್ ರಾಕೆಟ್ ವೇಗದಲ್ಲಿ ಬೈಕ್ ಚೇಸ್ ಮಾಡಿದ್ದಾನೆ. ಚೇಸ್ ಮಾಡ್ತಿರೋದು ಗೊತ್ತಾಗ್ತಿದ್ದಂತೆ ಮಹೇಶ ಬೈಕ್ ಅಕ್ಸಲೇಟರ್ ರೈಸ್ ಮಾಡಿದ್ದಾನೆ. ಬೈಕ್ ಮೈನ್ ರೋಡ್ ನಿಂದ ಗಲ್ಲಿ ರೋಡ್ ಗೆ ನುಗ್ಗಿಸಿದ್ದಾನೆ. ಅಲ್ಲೇ ಲಿಖಿತ್ ಹಾಗೂ ಬಾಲಾಜಿನ್ನ ಇಳಿಸಿ, ಸಪ್ತಗಿರಿ ಲೇಔಟ್ ನ ಗಲ್ಲಿ ರೋಡ್ ಕಡೆ ಹೋಗಿದ್ದಾನೆ,
ಹಿಂದೆಯಿಂದ ಸ್ವೀಡಾಗಿ ಬಂದ ಕಾರು ಟರ್ನಿಂಗ್ ನಲ್ಲಿ ಬೈಕ್ ಗೆ ಗುದ್ದಿದ್ದಾರೆ. ಗುದ್ದಿದ್ದ ರಭಸಕ್ಕೆ ಅತನ ತಲೆ ಗೋಡೆಗೆ ಬಡಿದು ಮಹೇಶ್ ಪ್ರಾಣ ಪಕ್ಷಿ ಹಾರಿಹೋಗಿದೆ.ಎದೆಯೆತ್ತರಕ್ಕೆ ಬೆಳೆದ ಮಗನ ಶವ ಕಂಡು ತಂದೆ-ತಾಯಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಚಾಮುಂಡೇಶ್ವರಿ ಲೇಔಟ್ ನಿವಾಸಿಯಾಗಿದ್ದ ಮಹೇಶ್, ಕೆಲಸ ಹುಡಕಾಡ್ತಿದ್ದ. ಇತ್ತ ಆರೋಪಿ ಅರವಿಂದ್ ಖಾಸಗಿ ಬ್ಯಾಂಕ್‌ಮ್ಯಾನೇಜರ್ ಆಗಿದ್ದು, ಕೋಪದ ಕೈಗೆ ಬುದ್ದಿಕೊಟ್ಟು ಜೈಲು ಸೇರಿದ್ದಾನೆ. ಸಾಥ್ ಕೊಟ್ಟಿದ್ದ ಚೆನ್ನಾಕೇಶವನೂ ವಿಚಾರಣೆ ಎದುರಿಸ್ತಿದ್ದಾನೆ..