ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪದ ಮೇಲೆ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುವಾಸ ಅನುಭವಿಸುತ್ತಿತ್ತು. ಆದರೆ ಜೈಲು ಸೇರಿರೋ ದರ್ಶನ್ ರಾಜ್ಯಾತಿಥ್ಯದ ವೈರಲ್ ಫೋಟೋಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಕೇಸ್ಗೆ ಸಂಬಂಧಪಟ್ಟಂತೆ ಕೋರ್ಟ್ ನಿರ್ದೇಶನದಂತೆ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.
ನಿಯಮದ ಪ್ರಕಾರ ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಆದ್ರೆ ಭದ್ರತಾ ದೃಷ್ಟಿಯಿಂದ ದರ್ಶನ್ರನ್ನು ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಹೊರಟಿದ್ದರು. ಇದೀಗ ದರ್ಶನ್ ಅವರನ್ನು ಕರೆದುಕೊಂಡು ಹೊರಟಿದ್ದ ಪೊಲೀಸ್ ವಾಹನ ಬಳ್ಳಾರಿ ಜೈಲು ತಲುಪಿವೆ. ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. 2017ರಲ್ಲಿ ತೆರೆಕಂಡ ಚೌಕ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಟ ದರ್ಶನ್ ಫೈಟಿಂಗ್ ಸೀನ್ ಮಾಡಿದ್ದರು. ಹೀಗಾಗಿ ದರ್ಶನ್ ಬಳ್ಳಾರಿ ಜೈಲಿಗೆ 7 ವರ್ಷದ ಹಿಂದೆ ಬಂದಿದ್ದರು.
ದರ್ಶನ್ ನೋಡಲು ಬಳ್ಳಾರಿ ಜೈಲಿನ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್ ಇದ್ದ ವಾಹನ ಬರುತ್ತಿದ್ದಂತೆಯೇ ದರ್ಶನ್, ದರ್ಶನ್ ಎಂದು ಅಭಿಮಾನಿಗಳು ಕೂಗಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳಿಗೆ ಪೊಲೀಸರು ಏಟು ಕೊಟ್ಟಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಚೇರ್ ಮೇಲೆ ಕುಳಿತು ಸಿಗರೇಟ್ ಸೇದುತ್ತಾ, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಥರದ ನಟೋರಿಯಸ್ ಪಾತಕಿಗಳ ಜೊತೆಗೆ ಬಿಂದಾಸ್ ಆಗಿ ಮಾತುಕತೆ ಮಾಡುತ್ತಿದ್ದರು. ಇದು ಅವರು ಜೈಲಿನಲ್ಲಿ ಎಷ್ಟು ಆರಾಮಾಗಿ ಇದ್ದಾರೆ, ಎಷ್ಟೆಲ್ಲಾ ಸೌಲಭ್ಯ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಆಗಿದ್ದವು. ಇದಕ್ಕೆ ಬ್ರೇಕ್ ಹಾಕೋದಕ್ಕೆ ಅಂತಾನೆ ಬಂಧಿಖಾನೆ ಅಧಿಕಾರಿಗಳು ದರ್ಶನ್ರನ್ನ ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ.