ರೈತರ ಹೆಸರಲ್ಲಿ ಮಣ್ಣು ಕದ್ದು “ಕೋಟಿ ಕೋಟಿ” ಹಣ ಹೊಡೆದವರ ಹೆಸರು ಬಹಿರಂಗ…!!!
ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದು ಹೇಳಿ ಕೋಟಿ ಕೋಟಿ ಹಣವನ್ನ ಮಣ್ಣಿನ ಜೊತೆ ಕೊಳ್ಳೆ ಹೊಡೆದಿರುವುದು ಬಹಿರಂಗವಾಗಲಿದೆ.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ನವಲಗುಂದ ಪಾರಂಪರಿಕ ಗುಡ್ಡದ ಮಣ್ಣು ಕದಿಯಬೇಡಿ ಎಂದು ಹೇಳಿದ್ದೆ ತಡ, ಹಲವು ಕೋಟಿಯ ಹಗರಣ ಬಯಲಿಗೆ ಬರತೊಡಗಿದೆ.
ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲೂ ನಡೆಯದ ಹಗರಣವೊಂದು ನವಲಗುಂದ ಕ್ಷೇತ್ರದಲ್ಲಿ ನಡೆದಿದ್ದು, ರೈತರ ಹೆಸರಿನಲ್ಲಿ ಯಾರು ಹಣ ಪಡೆದಿದ್ದಾರೆ ಎಂಬ ದಾಖಲೆಗಳು ಉದಯವಾರ್ತೆಗೆ ಲಭಿಸಿವೆ.
ನವಲಗುಂದ ಕ್ಷೇತ್ರದ ರೈತರ ಹೆಸರನ್ನ ದುರ್ಬಳಕೆ ಮಾಡಿಕೊಂಡು, ಕುಮಾರಗೊಪ್ಪ ಕ್ರಾಸ್ ಬಳಿ ಪುರಸಭೆಯ ಸದಸ್ಯೆಯ ಪತಿಯೋರ್ವ “ದಾಬಾ”ಗಳಲ್ಲಿ ಅಕ್ರಮ ಮದ್ಯ ಮಾರಾಟ ಗಿರಾಕಿಯೊಂದಿಗೆ ಸಭೆ ನಡೆಸಿ, ಅಮಾಯಕ ಜನರನ್ನ ದಾರಿ ತಪ್ಪಿಸಬಹುದೇ ಹೊರತು, ದಾಖಲೆಗಳನ್ನ ಮರೆಮಾಚಲು ಸಾಧ್ಯವಿಲ್ಲ ಎಂಬುದು ಶೀಘ್ರದಲ್ಲಿ ಬಹಿರಂಗವಾಗಲಿದೆ.
ಯಾವ್ಯಾವ ಏಜೆನ್ಸಿ ಮತ್ತು ಗುತ್ತಿಗೆದಾರ ಈಗಾಗಲೇ ಪಡೆದಿರುವ ಹಣದ ಮಾಹಿತಿಯನ್ನ ಉದಯವಾರ್ತೆಯಲ್ಲಿ ನಿರೀಕ್ಷಿಸಿ.