ಬೆಂಗಳೂರು:- ನಗರದ ಯಶವಂತಪುರ ಸರ್ಕಲ್ನಲ್ಲಿ ಬೈಕ್ಗೆ ಡಿಕ್ಕಿ ಹೊಡೆದು ಕಾರು ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದಿರುವ ಭೀಕರ ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ಇಬ್ಬರು, ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಬೆಳಗ್ಗೆ 3:45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರು ವೇಗದ ಪರಿಣಾಮದಿಂದಾಗಿ ಫ್ಲೈಓವರ್ ಮೇಲಿನ ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಬೈಕ್ಗೆ ಗುದ್ದಿದೆ.
ಇದರಿಂದ ಫ್ಲೈಓವರ್ ಮೇಲಿನಿಂದ ಕಾರು ಕೆಳಗೆ ಬಿದ್ದಿದೆ. ಚಾಲಕ ಕುಡಿದು ಕಾರು ಓಡಿಸಿರುವ ಶಂಕೆಯಿದ್ದು, ಕಾರು ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಖಾಲಿ ಮದ್ಯ ಬಾಟಲಿಗಳು ಪತ್ತೆಯಾಗಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.