ಅಂತೂ ಇಂತೂ ಪಾಲಿಕೆಯ ಉದ್ಯಾನವನಕ್ಕೆ ಬಿತ್ತು ಬ್ಲ್ಯಾಕ್ ಆ್ಯಂಡ್ ವೈಟ್ ಬೋಡ್೯…ನಡೀತು ಗದ್ದಲದಲ್ಲಿ ಗೌಡರ ಗದ್ದಲ….
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಯನ್ನ ಅಂಜನಾ ಪಟೇಲ ಸೇವಾ ಸಮಾಜ ಅತೀಕ್ರಮಣ ಮಾಡಿಕೊಂಡಿತ್ತು.ಅತೀಕ್ರಮಣದ ವರದಿಯನ್ನ ಉದಯ ವಾರ್ತೆ ಪ್ರಸಾರ ಮಾಡಿತ್ತು.ಆ ವರದಿಯ ಹಿನ್ನೆಲೆಯಲ್ಲಿ ಇಂದು ಪಾಲಿಕೆಯ ಸಹಾಯಕ ಆಯುಕ್ತರಾದ ಮಾಲಿಪಾಟೀಲ ಉದ್ಯಾನವನಕ್ಕೆ ಪಾಲಿಕೆಯ ಬೋಡ್೯ ಹಾಕಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯ ಕೋಟಿಲಿಂಗೇಶ್ವರ ನಗರದಲ್ಲಿರುವ ಅಂಜನಾ ಪಟೇಲ ಸೇವಾ ಸಮಾಜ ಮಹಾನಗರ ಪಾಲಿಕೆಯ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯನ್ನು ದಶಕಗಳ ಕಾಲ ಅತಿಕ್ರಮಿಸಿಕೊಂಡಿದ್ದರು.ಈಗ ಆ ಆಸ್ತಿಯನ್ನ ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉದ್ಯಾನವನ ಅಂತಾ ಬೋಡ್೯ ಹಾಕಿ ಬಂದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮಹಾನಗರ ಪಾಲಿಕೆಯ ಆಸ್ತಿಯನ್ನ ಬಳಸಿಕೊಂಡಿರುವ ಅಂಜನಾ ಪಟೇಲ ಸೇವಾ ಸಮಾಜಕ್ಕೆ ಒಂದೇ ಒಂದು ನೋಟೀಸ್ ಕೊಡದೇ ಸುಮ್ಮನೆ ಬೋಡ್೯ ಹಾಕಿ ಬಂದಿರುವ ಅಧಿಕಾರಿಗಳಿಗೆ ಏನು ಅನ್ನಬೇಕೋ ಗೊತ್ತಿಲ್ಲಾ.ಕನಿಷ್ಠ ಒಂದು ನೋಟೀಸ್ ಅಥವಾ FIR ದಾಖಲಿಸಬಹುದಿತ್ತು.ಅಲ್ಲದೇ ದಶಕಗಳ ಕಾಲ ಉದ್ಯಾನವನ ಬಳಕೆ ಮಾಡಿಕೊಂಡಿದ್ದಕ್ಕೆ ಅವರಿಗೆ ದಂಡ ಆದರೂ ವಿಧಿಸಬಹುದಿತ್ತು.ಇದ್ಯಾವುದೂ ಪಾಲಿಕೆಯ ಅಧಿಕಾರಿಗಳಿಂದ ಆಗದಿದ್ದರೆ ಅವರನ್ನು ಕರೆದು ಸನ್ಮಾನವಾದರೂ ಮಾಡ್ರೀ ಸಾಹೇಬರೇ..