ಮೈಸೂರು: ಸಾಮಾನ್ಯವಾಗಿ ಪೊಲೀಸರು ಕಳ್ಳರನ್ನು ಹಿಡಿಯಬೇಕು ಆದ್ರೆ ಇಲ್ಲಿ ಪೊಲೀಸರೆ ಕಳ್ಳರಿಗೆ ಕಾವಾಲಗಿದ್ದಾರೆ. ಕಾಯುವವರೇ ಕಳ್ಳತನ ಸಾಥ್ ನೀಡಿದ್ರೆ ಜನ ಸಾಮಾನ್ಯರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮೂಡಿದೆ. ಹೌದು, ಮನೆಗಳ್ಳರಿಗೆ ಸಾಥ್ ನೀಡಿದ್ದ ಹಿನ್ನಲೆ ಮೈಸೂರಿನ ಅಶೋಕಪುರಂ ಠಾಣೆ ಹೆಡ್ಕಾನ್ಸ್ ಟೇಬಲ್ ರಾಜು ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೈಸೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳವು ಮಾಡಿದ್ದ ನಜರುಲ್ಲಾ ಬಾಬು, ಅಲೀಂ. ಸುಮಾರು 400 ಗ್ರಾಂ ಚಿನ್ನಾಭರಣ ಕದ್ದಿದ್ದರು. ಜೊತೆಗೆ ಕದ್ದಿದ್ದ 400 ಗ್ರಾಂ ಚಿನ್ನದಲ್ಲಿ 300 ಗ್ರಾಂನ್ನು ಹೆಚ್ಸಿ ರಾಜುಗೆ ನೀಡಿದ್ದರು.
ಉಳಿದ 100 ಗ್ರಾಂ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಬಳಿಕ ನಜರುಲ್ಲಾ ಬಾಬು, ಅಲೀಂನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಹೆಡ್ಕಾನ್ಸ್ಟೇಬಲ್ ರಾಜು ಬಗ್ಗೆ ಕಳ್ಳರು ಬಾಯ್ಬಿಟ್ಟಿದ್ದು, ಈ ಹಿನ್ನಲೆ ಅಶೋಕಪುರಂ ಠಾಣೆ ಹೆಡ್ಕಾನ್ಸ್ಟೇಬಲ್ ರಾಜು ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲವು ಕೇಸ್ಗಳಲ್ಲಿ ಹೆಡ್ಕಾನ್ಸ್ಟೇಬಲ್ ರಾಜು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮಂಡಿ ಠಾಣೆ ಪೊಲೀಸರಿಂದ ಹೆಡ್ಕಾನ್ಸ್ಟೇಬಲ್ ರಾಜು ವಿಚಾರಣೆ ಮಾಡಲಾಗುತ್ತಿದೆ.