ದಾವಣಗೆರೆಯಲ್ಲಿ ನಿಜಕ್ಕೂ ಗ್ಯಾಂಗ್ ರೇಪ್ ನಡೆದಿತ್ತಾ!? ಎಸ್ಪಿ ಹೇಳಿದ್ದೇನು!?

Share to all

ದಾವಣಗೆರೆ:- ಸಾಮೂಹಿಕ ರೇಪ್ ಆಗಿದೆ ಎಂದ ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಅಬ್ಬಿಸಿದ ಸುದ್ದಿಗೆ ಇದೀಗ ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟನೆ ಕೊಟ್ಟಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ್ದು, ಸುಳ್ಳು ಸುದ್ದಿ ಅಂತ ಸಾಬೀತಾಗಿದೆ. ಬಳಿಕ ಪೊಲೀಸರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​ ಮಾಡಿದ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರನ್ನು ಕರೆಸಿ, ಇನ್ನೊಮ್ಮೆ ಈ ರೀತಿ ಪೋಸ್ಟ್​​ ಹಾಕದಂತೆ ತಾಕೀತು ಮಾಡಿದರು. ಇದು ಅಪರಾಧವಾಗಿದ್ದು, ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಉಮಾ ಪ್ರಶಾಂತ ಎಚ್ಚರಿಕೆ ನೀಡಿದರು.

ಇನ್ನೂ ದಾವಣಗೆರೆ ಮೂಲದ ವಿದ್ಯಾರ್ಥಿಯೊಬ್ಬಳು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ “ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಓರ್ವ ವಿದ್ಯಾರ್ಥಿನಿ ಮೇಲೆ ಯುವಕರಿಂದ ಗ್ಯಾಂಗ್ ರೇಪ್ ಆಗಿದೆ.‌ ಹುಷಾರಾಗಿ ಓಡಾಡಿ.‌ ಒಬ್ಬಂಟಿಯಾಗಿ ಓಡಾಡಬೇಡಿ ಎಂದು ಪೋಸ್ಟ್​ ಹಾಕಿಕಿದ್ದಳು. ಇದು ರಾಜ್ಯಾದ್ಯಂತ ಹರಿದಾಡಿತ್ತು.


Share to all

You May Also Like

More From Author