ಪಾರ್ಕಿಂಗ್ ಡ್ರೈವ್ ಗೆ ರೂಪರೇಶ ರೆಡಿ ಮಾಡಿದ ಕಮೀಷನರ್..ಪಾರ್ಕಿಂಗ್ ಜಾಗೆ ಅತಿಕ್ರಮಿಸದವರಿಗೆ ಸುರುವಾಯ್ತು ಡವ..ಡವ..ಕಮೀಷನರ್ ಗೆ ಸಾಥ್ ಕೊಡತಾರಾ ಪಾಲಿಕೆಯ ಅಧಿಕಾರಿಗಳು…ಜನಪ್ರತಿನಿಧಿಗಳ ಕಣ್ಣಾ ಮುಚ್ಚಾಲೆ ಆಟ ಶುರು..
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ದಿನೇ ದಿನೇ ಬೆಳೆಯುತ್ತಾ ಮುಂಬೈ ಸಿಟಿಯನ್ನು ಮೀರಿಸುವ ಹಂತಕ್ಕೆ ವ್ಯಾಪಾರ ವಹಿವಾಟು ಬೆಳೆಯುತ್ತಿದೆ..ಆದರೆ ಬ್ಯುಸಿನೆಸ್ ಬೆಳೆದಂತೆ ಸಿಟಿಯಲ್ಲಿ ಪಾರ್ಕಿಂಗ್ ಅತೀಕ್ರಮಣ ದಂಧೆ ಹಲವಾರು ರೂಪ ಪಡೆದುಕೊಳ್ಳುತ್ತಿದೆ.
ಕೆಎಂಸಿ ಕಾಯ್ದೆ 1976 ಕಲಂ 301 ರ ಹಾಗೂ ಕರ್ನಾಟಕ ನಗರ ಯೋಜನೆ ಹಾಗೂ ಗ್ರಾಮಾಂತರ ಕಾಯ್ದೆ 1961 ರ ಕಲಂ 15 ರ ಅನ್ವಯ ಪಾರ್ಕಿಂಗ್ ಗೆ ಜಾಗಾ ತೋರಿಸಿ ಕಟ್ಟಡ ಕಟ್ಟಿ ಸಿಸಿ ಪಡೆದುಕೊಂಡು ನಂತರ ಪಾರ್ಕಿಂಗ್ ಜಾಗೆಯಲ್ಲಿ ವಿವಿಧ ಉದ್ದೇಶಗಳಿಗೆ ಪಾರ್ಕಿಂಗ್ ಜಾಗ ಬಳಸಿಕೊಂಡು ವಾಹನಗಳು ನಿಲ್ಲಲು ಜಾಗೆ ಇಲ್ಲದಂತೆ ಮಾಡುತ್ತಾರೆ.ಅದೇ ಈಗ ಸಿಟಿಯಲ್ಲಿ ವಾಹನಗಳು ಎಲ್ಲೆಂದರಲ್ಲಿ ನಿಂತು ಟ್ರಾಪಿಕ್ ಜಾಮ್ ಆಗುತ್ತಿದೆ.
ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿಯ ಪಾರ್ಕಿಂಗ್ ಸಮಸ್ಯೆ ಹೋಗಲಾಡಿಸಲು ಸ್ಟಡಿ ಮಾಡಿದ ಕಮೀಷನರ್ ಡಾ: ಈಶ್ವರ ಉಳ್ಳಾಗಡ್ಡಿ ಅವರು ನೀಟಾಗಿ ಒಂದು ಪ್ಲ್ಯಾನ್ ರೆಡಿ ಮಾಡಿ,ಪಾರ್ಕಿಂಗ್ ಡ್ರೈವ್ ಗೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ.ಅದಕ್ಕಾಗಿಯೇ ಪಾಲಿಕೆಯ ಸಹಾಯಕ ಆಯುಕ್ತರು,ನಗರಯೋಜನೆ ಅಧಿಕಾರಿಗಳು, ಸೇರಿದಂತೆ ಹಲವರನ್ನು ಒಳಗೊಂಡ ಟೀಂ ಗಳನ್ನು ರೆಡಿ ಮಾಡಿದ್ದಾರೆ.