ಬರ್ತಡೇ ಸಂಭ್ರಮದಲ್ಲಿ ಸಖತ್ ಪೋಸ್ ಕೊಟ್ಟ ಮಿಸ್ಟರ್ ಫರ್ಪೆಕ್ಟ್: ರಮೇಶ್ ಅರವಿಂದ್ ಸ್ಟೈಲೀಶ್ ಕಾಸ್ಟ್ಯೂಮ್ ಹಿಂದಿನ ಮಾಸ್ಟರ್ ಮೈಂಡ್ ಇವ್ರೇ

Share to all

ರಮೇಶ್ ಅರವಿಂದ್ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೋದರೆ ಅವರೊಬ್ಬ ಬಹುಮುಖ ಪ್ರತಿಭೆ. ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್‍ ಜನುಮದಿನದ ಸಂಭ್ರಮದಲ್ಲಿದ್ದಾರೆ. ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ಅವರು ಇಂದಿಗೂ ಕೂಡ ಬೇಡಿಕೆಯ ನಟ. ರಮೇಶ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

ರಮೇಶ್ ಅರವಿಂದ್ ನಾಳೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತಡೇ ಮುನ್ನ ದಿನವಾದ ಇಂದು ರೆಟ್ರೋ ಲುಕ್ ನಲ್ಲಿ ಕ್ಯಾಮೆರಾಗೆ ತರೇಹವಾರಿ ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ಬಟ್ಟೆಯಲ್ಲಿ ರಮೇಶ್ ಚಿರಯುವಕನಂತೆ ಕಂಗೊಳಿಸಿದ್ದಾರೆ.

ಯಾರು ಈ ಭರತ್?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ನಲ್ಲಿ ತೊಡುವ ಸ್ಟೈಲೀಶ್ ಕಾಸ್ಟ್ಯೂಮ್ ಗಳನ್ನು ನೀವೆಲ್ಲಾ ನೋಡೇ ಇರ್ತಿರಾ. ವೀಕೆಂಡ್ ನಲ್ಲಿ ಸಖತ್ ಡಿಫರೆಂಟ್ ಕಾಸ್ಟ್ಯೂಮ್ ನಲ್ಲಿ ಕಿಚ್ಚ ಕಾಣಿಸಿಕೊಳ್ತಿದ್ದರು. ಕಿಚ್ಚನ ಆ ಸ್ಟೈಲೀಶ್ ಅವತಾರದ ಹಿಂದಿನ ರೂವಾರಿಯೇ ಈ ಭರತ್.. ಭರತ್ ಕಿಚ್ಚನಿಗೆ ಮಾತ್ರವಲ್ಲ ಸಾಕಷ್ಟು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಕಾಸ್ಟ್ಯೂಮ್ ಡಿಸೈನರ್ ಇವರೇನೆ..


Share to all

You May Also Like

More From Author