ನಾಳೆಯೇ ಸಿನಿಮಾ ರಿಲೀಸ್ ಆಗಬೇಕಿತ್ತು: ಖುಷಿಯಲ್ಲಿದ್ದ ಹೀರೋ ಕಿರಣ್ ರಾಜ್ʼಗೆ ಅಪಘಾತ

Share to all

‘ಕನ್ನಡತಿ’ ಮೂಲಕ ಫೇಮಸ್ ಆದ ನಟ ಕಿರಣ್ ರಾಜ್​ ಅವರಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಕನ್ನಡತಿ ಮೂಲಕ ಇಡೀ ಕನ್ನಡಿಗರ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್​​​ ರಾಜ್ ಸಿನಿಮಾ ರಿಲೀಸ್​ ಆಗುತ್ತಿದೆ.​​​ ನಾಳೆ ರಾಜ್ಯಾದ್ಯಂತ ಬಹುನೀರಿಕ್ಷಿತ ಸಿನಿಮಾ ರಾನಿ ರಿಲೀಸ್​ ಆಗುತ್ತಿದೆ. ಆದರೆ ಇದರ ಮಧ್ಯೆ ನಟ ಕಿರಣ್ ರಾಜ್​ ಕಾರಿಗೆ ಅಪಘಾತವಾಗಿದೆ. ಕಿರಣ್ ರಾಜ್​ಗೆ ಕೆಂಗೇರಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಎಕ್ಸಿಕ್ಯೂಟಿವ್​ ಪ್ರೊಡ್ಯೂಸರ್ ಪಾರಾಗಿದ್ದಾರೆ.

ಕಿರಣ್ ರಾಜ್ ಅವರು ಸದ್ಯ ಕಿರುತೆರೆಯಿಂದ ದೂರ ಇದ್ದಾರೆ. ಅವರು ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಸೆಪ್ಟೆಂಬರ್ 12ರಂದು ಅವರ ನಟನೆಯ ‘ರಾನಿ’ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಈ ರೀತಿಯ ದುರ್ಘಟನೆ ನಡೆದಿದೆ ಅನ್ನೋದು ಬೇಸರದ ವಿಚಾರ.

ಕಿರಣ್ ರಾಜ್ ಅವರು ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ಅವರು ಆ ಬಳಿಕ ಕನ್ನಡ ಕಿರುತೆರೆಗೆ ಮರಳಿದರು. ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಆಗಿ ಅವರು ಗಮನ ಸೆಳೆದರು. ಈ ಮೂಲಕ ಫೇಮಸ್ ಆದರು. ಈಗ ಅವರು ಹಿರಿತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ನಟನೆಯ ಸಿನಿಮಾಗಳು ರಿಲೀಸ್ ಆಗುತ್ತಿವೆ.

 


Share to all

You May Also Like

More From Author