ಶಾಸಕನ ಅಸಲಿ ಲೀಕ್ ವೀಡಿಯೋ… ಇಲ್ಲಿದೆ ನೋಡಿ… “ಹಸಿರು ಟವೆಲ್ನಿಂದ” ಬೃಹತ್ ಲೂ……..!!!!
ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ಉದಯವಾರ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುತೂಹಲಕ್ಕೆ ಕಾರಣವಾಗಿರು
ವ ವೀಡಿಯೋ ಹೊರ ಹಾಕುವ ಸಮಯ ಬಂದಾಗಿದೆ. ಇಲ್ಲಿದೆ ನೋಡಿ ಆ ಎಕ್ಸಕ್ಲೂಸಿವ್ ವೀಡಿಯೋ
ನವಲಗುಂದ ಕ್ಷೇತ್ರದ ಹಾಲಿ ಶಾಸಕ ಎನ್.ಎಚ್.ಕೋನರೆಡ್ಡಿಯವರು ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಈ ವೀಡಿಯೋ ಸಾಕ್ಷಿ ನುಡಿಯುತ್ತಿದೆ. ಕಾಮಗಾರಿ ನಡೆಸಲು ನೀರಾವರಿ ಇಲಾಖೆಯ ಭೂಮಿಯ ಮಣ್ಣನ್ನ ಕದ್ದು ಸಾಗಾಟ ಮಾಡುವುದು ತಪ್ಪಲ್ಲ ಅಂತಾರೆ.
ಶಾಸಕರ ವರಸೆ ಹೇಗಿದೆ ಅಂದರೇ, ನೀರಾವರಿ ಇಲಾಖೆಗೆ ಸಂಬಂಧಿಸಿದ ಭೂಮಿಯಲ್ಲಿ ಮಣ್ಣು ತೆಗೆದುಕೊಳ್ಳುವುದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಿಗೆ ಅವಶ್ಯಕತೆ ಇಲ್ಲ ಎಂದು ಅದೇ ಇಲಾಖೆಯ ಅಧಿಕಾರಿಗೆ ಹೇಳ್ತಾರೆ.
ನವಲಗುಂದ ಪಾರಂಪರಿಕ ಗುಡ್ಡದ ಮಣ್ಣನ್ನ ತೆಗೆಯುವ ಮುನ್ನ ನೀರಾವರಿ ಇಲಾಖೆಯ ಮಣ್ಣನ್ನು ಲೂಟಿ ಮಾಡಿದ್ದು ಈ ಮೂಲಕ ಬಹಿರಂಗವಾಗಿದೆ.
ಶಾಸಕ ಎನ್.ಎಚ್.ಕೋನರೆಡ್ಡಿಯವರು ಶಾಸಕರಾಗಿದ್ದಾರಾ ಅಥವಾ ಗುತ್ತಿಗೆದಾರರಾಗಿದ್ದಾರಾ ಎಂಬ ಸಂಶಯವನ್ನ ಈ ವೀಡಿಯೋ ನೋಡಿದವರಿಗೆ ಅನಿಸದೇ ಇರದು.
ರೈತರ ಸಲುವಾಗಿ ರಸ್ತೆ ಮಾಡುತ್ತೇನೆ. ಅವರೇ ರಸ್ತೆ ಮಾಡಿಸಿಕೊಂಡಿದ್ದಾರೆ ಎಂದು ಕೋನರೆಡ್ಡಿಯವರು ಹೇಳ್ತಾರೆ. ಆದರೆ, ಅಧಿಕಾರಿಗಳ ಮೇಲೆ ಅವರು ಹಾಕಿರುವ ಒತ್ತಡ ಮತ್ತೂ ಹೇಳಿರುವ ಸುಳ್ಳು ಈ ವೀಡೀಯೋದಲ್ಲಿ ರಹಸ್ಯವಾಗಿ ಉಳಿದಿಲ್ಲ.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಮಾಡಿದ ಆರೋಪಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಗರಣ ನಡೆದಿರಬಹುದೆಂಬ ಶಂಕೆ ಈ ಮೂಲಕ ಹೆಚ್ಚಾಗಿದೆ.
ಈಗಾಗಲೇ ಕೋಟ್ಯಾಂತರ ರೂಪಾಯಿ ಹಣವನ್ನ ಸಂಬಂಧಿಯೊಬ್ಬರ ಹೆಸರಿನಲ್ಲಿ ತೆಗೆದಿರುವ ದಾಖಲೆಗಳೂ ಉದಯವಾರ್ತೆಗೆ ಲಭಿಸಿದ್ದು, ನಾಳೆಗೆ ಇಡೀ ದಾಖಲೆಗಳು ಹೊರ ಬೀಳಲಿವೆ.
ದೇಶದ ಬೆನ್ನಲಬಿನ ಹೆಸರಿನಲ್ಲಿ ರಾಜಕೀಯ ಮಾಡಿದವರನ್ನ ಬಹುತೇಕರು ಮಾಡಿದ್ದಾರೆಂಬ ಮಾತುಗಳಿವೆ. ಆದರಿಲ್ಲಿ, ರೈತರ ಹೆಸರಿನಲ್ಲಿ ಸರಕಾರದ ಮಣ್ಣು ಕದ್ದು ಕೋಟಿ ಕೋಟಿ ರೂಪಾಯಿ ಕೊಳ್ಳೆ ಹೊಡೆದಿರುವ ಸಾಧ್ಯತೆಯಿದೆ.
ನಿಷ್ಠಾವಂತ ರಾಜಕಾರಣಿ ಸಂತೋಷ ಲಾಡ್ ಅವರು ತನಿಖೆ ಮಾಡುವ ಭರವಸೆ ನೀಡಿ, ನನಗೆ ಸಂಪೂರ್ಣ ಮಾಹಿತಿ ಇಲ್ಲ ಅಂದಿದ್ರು. ಇದೊಂದು ವೀಡಿಯೋ ಅವರಿಗೆ ಮಾಹಿತಿ ಆಗಬಹುದು ಎಂಬುದು ಪ್ರಜ್ಞಾವಂತರ ಮಾತಾಗಿದೆ.