ಪ್ರತಿಷ್ಠಿತ ಹುಬ್ಬಳ್ಳಿಯ ಹೊಟೆಲ್ಲೊಂದರ ಮೇಲೆ ತಡ ರಾತ್ರಿ ಪೋಲೀಸರ ದಾಳಿ.ಡಿವಿಆರ್ ವಶಕ್ಕೆ.

Share to all

ಪ್ರತಿಷ್ಠಿತ ಹುಬ್ಬಳ್ಳಿಯ ಹೊಟೆಲ್ಲೊಂದರ ಮೇಲೆ ತಡ ರಾತ್ರಿ ಪೋಲೀಸರ ದಾಳಿ.ಡಿವಿಆರ್ ವಶಕ್ಕೆ.

ಹುಬ್ಬಳ್ಳಿಯ:- ಹುಬ್ಬಳ್ಳಿಯ ನವನಗರದ ಬಳಿ ಇರುವ ಪ್ರತಿಷ್ಠಿತ ರಾಯಲ್ ರಿಡ್ಜ್ ಹೊಟೆಲ್ ಮೇಲೆ ಪೋಲೀಸರು ದಾಳಿ ಮಾಡಿ ಸಿಸಿ ಕ್ಯಾಮರಾದ ಡಿವಿಆರ್ ವಶಕ್ಕೆ ಪಡೆದಿದ್ದಾರೆ.
ಇದು ಉದಯ ವಾರ್ತೆಯ ಬಿಗ್ ಇಂಪ್ಯಾಕ್ಟ್ ಸ್ಟೋರಿ.

ಡಿಸಿಪಿ ಹಾಗೂ ಎಸಿಪಿ ನೇತೃತ್ವದಲ್ಲಿ ದಾಳಿ ಮಾಡಿದ ಪೋಲೀಸರು ಹೊಟೆಲ್ ನಲ್ಲಿ ನಡೆಯುತ್ತಿದ್ದ ಕತ್ತಲ ಲೋಕದಲ್ಲಿ ಬೆಳದಿಂಗಳ ಬಾಲೆಯರನ್ನು ಹೊರಗಟ್ಟಿ ಹೊಟೆಲ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ.

ಹೊಟೆಲ್ ಆರಂಭವಾದಾಗಿನಿಂದ ಈವರೆಗೂ ಯಾರೂ ಟಚ್ ಮಾಡದ ಹೊಟೆಲ್ ನ್ನು ಇವತ್ತು ಹುಬ್ಬಳ್ಳಿ ಪೋಲೀಸರು ಟಚ್ ಮಾಡಿ ಹೊಟೆಲ್ ಮಾಲಿಕರಿಗೆ ನಡುಕ ಹುಟ್ಟಿಸಿದ್ದಾರೆ.

ಆ ಕತ್ತಲ ರಾತ್ರಿಯ ಬಗ್ಗೆ ನಿನ್ನೆ ಉದಯ ವಾರ್ತೆ ನ್ಯೂಸ್ ಕನ್ನಡ ಎಳೆ ಎಳೆಯಾಗಿ ವರದಿ ಪ್ರಸಾರ ಮಾಡಿತ್ತು.ಆ ವರದಿಗೆ ಸ್ಪಂದಿಸಿದ ಖಡಕ್ ಪೋಲೀಸ ಕಮೀಷನರ್ ಎನ್ ಶಶಿಕುಮಾರ ಮಾರ್ಗದರ್ಶನದಲ್ಲಿ ಡಿಸಿಪಿ ಖನಗಾವಿ ಹಾಗೂ ಎಸಿಪಿ ಶಿವಪ್ರಕಾಶ್ ನಾಯಕ್ ಹೊಟೆಲ್ ಮೇಲೆ ದಾಳಿ ಮಾಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author