ಸಿಎಂ‌ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಲು ಬಿಜೆಪಿ ಷಡ್ಯಂತ್ರ..ಬಿಜೆಪಿ ಷಡ್ಯಂತ್ರ ಫಲಿಸದು. ಶಾಸಕ ಅಬ್ಬಯ್ಯ.

Share to all

ಸಿಎಂ‌ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಲು ಬಿಜೆಪಿ ಷಡ್ಯಂತ್ರ..ಬಿಜೆಪಿ ಷಡ್ಯಂತ್ರ ಫಲಿಸದು. ಶಾಸಕ ಅಬ್ಬಯ್ಯ.

ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದಾರಾಮಯ್ಯ ಜನಪ್ರಿಯತೆ ಸಹಿಸದೆ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ದೊಡ್ಡ ಷಡ್ಯಂತ್ರ ಮಾಡಿದ್ದಾರೆ. ಆದರೆ, ಬಿಜೆಪಿಯ ಷಡ್ಯಂತ್ರ ಯಶಸ್ವಿಯಾಗುವುದಿಲ್ಲ ಎಂದು ಸ್ಲಮ್ ಬೋರ್ಡ್ ಅಧ್ಯಕ್ಷರು, ಪೂರ್ವ ಕ್ಷೇತ್ರದ ಶಾಸಕರಾದ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಬಿಜೆಪಿ ಸರ್ಕಾರವು ದೇಶದ ವಿವಿಧ ರಾಜ್ಯಗಳಲ್ಲಿ ಆಡಳಿತ ಪಕ್ಷವನ್ನು ಕುತಂತ್ರದಿಂದ ಕೆಡವಿ ಹಿಂಬಾಗಿಲಿನಿಂದ ತಮ್ಮ ಸರ್ಕಾರ ರಚನೆ ಮಾಡಿದ ನಿದರ್ಶನಗಳು ಜನರಿಗೆ ಗೊತ್ತಿದೆ. ಮಹಾರಾಷ್ಟ್ರ, ಅಸಾಂ, ಮಧ್ಯ ಪ್ರದೇಶ, ಬಿಹಾರ, ಗೋವಾ, ಸೇರಿದಂತೆ ಅಂದಾಜು 11ರಾಜ್ಯದ ಸರ್ಕಾರವನ್ನು ಕುತಂತ್ರದಿಂದ ಉರುಳಿಸಿ ಬಿಜೆಪಿ‌ ಆಡಳಿತ ರಚನೆ ಮಾಡಿರುವುದು ನಾವು ಕಂಡಿದ್ದೇವೆ. ಅದೇ ಮಾದರಿಯಲ್ಲಿ ಈಗ ಮತ್ತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನ ಮಾಡಲು ಷಡ್ಯಂತ್ರ ಮಾಡುತ್ತಿದ್ದಾರೆ. 136 ಶಾಸಕರು ಇದ್ದ ಹಿನ್ನೆಲೆಯಲ್ಲಿ ಖರೀದಿ ಮಾಡಲು ಆಗುತ್ತಿಲ್ಲ ಹೀಗಾಗಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಲ್ಲದೆ ಸಿಬಿಐ ಐಟಿ ಇಡಿ ಏಜೆಂಟರಂತೆ ಬಳಸಿಕೊಳ್ಳುತಿದ್ದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ, ಅವರು ಯಾವತ್ತೂ ರಾಜ್ಯದಲ್ಲಿ ಸಫಲರಾಗುವುದಿಲ್ಲ ಎಂದು ಶಾಸಕ‌ ಅಬ್ಬಯ್ಯ ಹೇಳಿದ್ದಾರೆ.

ಇಂದು ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯುಷನ್ ಗೆ ಅನಮತಿ‌ ನೀಡಲಾಗಿದೆ. ನಮಗೂ ಕೂಡ ಕಾನೂನು ಹೋರಾಟಕ್ಕೆ ಸಾಕಷ್ಟು ಅವಕಾಶಗಳಿವೆ. ನಾವು ಎಲ್ಲ ಅವಕಾಶಗಳನ್ನು ಬಳಿಸಿಕೊಳ್ಳುತ್ತೇವೆ. ಮತ್ತು ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಪ್ರಕರಣದಿಂದ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಮಾಜಿ ಸಿ.ಎಂ. ಯಡಿಯೂರಪ್ಪ ಅವರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ‌ ನೀಡಿದ ತಕ್ಷಣ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಬದಲಾಗಿ ಜಮೀನು ಡಿ-ನೋಟಿಫಿಕೇಷನ್ ಕುರಿತು ಚಾರ್ಜಶೀಟ್ ಸಲ್ಲಿಸಿದ ಬಳಿಕ ರಾಜೀನಾಮೆ ನೀಡಿದ್ದರು ಎಂಬುದು ಗಮನಾರ್ಹ ವಿಷಯ. ಅದಕ್ಕಾಗಿ ಸದ್ಯ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.

Share to all

You May Also Like

More From Author