ಮಹಿಳೆಗೆ ಚಾಕು ಇರಿತ ಪ್ರಕರಣ..ಆರೋಪಿ ಮೇಲೆ ಪೋಲೀಸ್ ಪೈರಿಂಗ್..ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಸೇರಿ ಮೂವರು ಪೋಲೀಸರಿಗೆ ಗಾಯ.
ಹುಬ್ಬಳ್ಳಿ:- ಮಹಿಳೆಯೋರ್ವಳಿಗೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆರೋಪಿಗೆ ಹಳೇಹುಬ್ಬಳ್ಳಿ ಪೋಲೀಸರು ಪೈರಿಂಗ್ ಮಾಡಿದ್ದಾರೆ. ಆರೋಪಿ ತಪ್ಪಿಸಿಕೊಳ್ಳುವಾಗ ಪೋಲೀಸರ ಮೇಲೂ ಹಲ್ಲೆ ಮಾಡಿದ್ದಾನೆ.ಆ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿ ಪೋಲೀಸ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಹಾಗೂ ಸಿಬ್ಬಂದಿಗಳಿಗೂ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಪೋಲೀಸ ಕಮೀಷನರ್ ಎನ್ ಶಶಿಕುಮಾರ್ ಗಾಯಾಳು ಪೋಲೀಸರ ಆರೋಗ್ಯ ವಿಚಾರಿಸಿ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿರುವ ನೀಲಾ ಹಂಪಣ್ಣವರ ಮನೆಗೆ ನುಗ್ಗಿ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಚುಚ್ಚಿ ಗಾಯಗೊಳಿಸಿದ್ದಾನೆ ಎಂದು ಪೋಲೀಸ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.