BIGG BOSS 11ಕ್ಕೆ ಯಾವೆಲ್ಲ ಸ್ಟಾರ್ಸ್ ಬರ್ತಿದ್ದಾರೆ!? ಶೋ ಆರಂಭಕ್ಕೂ ಮುನ್ನವೇ ಐವರ ಹೆಸರು ರಿವಿಲ್!

Share to all

ಕನ್ನಡದ ಬಿಗ್​ ರಿಯಾಲಿಟಿ ಶೋ​ ಬಿಗ್​ಬಾಸ್​ ಸೀಸನ್​ 11ರ ಹೊಸ ಸೀಸನ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಈ ಮುಂಚೆಯೇ ಬಿಗ್​ಬಾಸ್​ ಸೀಸನ್​ 11ಕ್ಕೆ ಹೋಗುವ ಐದು ಸ್ಪರ್ಧಿಗಳು ಹೆಸರನ್ನು ಅಧಿಕೃತವಾಗಿ ಗೊತ್ತಾಗಲಿದೆ. ನಟಿ ಅನುಷಾ ರೈ ಅವರು ಬಿಗ್‌ಬಾಸ್‌ ಸೀಸನ್‌ 11ಗೆ ಸೆಲೆಕ್ಟ್ ಆಗಿದ್ದಾರೆ. ಸಿನಿಮಾ ಇಂಡಸ್ಟ್ರಿಯಿಂದ ಹಲವರು ಬರ್ತಾರೆ ಅನ್ನೋ ಸುದ್ದಿಯಿತ್ತು.

ಆದ್ರೆ, ಕೊನೆಗೆ ಇವರು ಕನ್ಫರ್ಮ ಆಗಿದ್ದಾರೆ. ಬಿಗ್​ಬಾಸ್​ಗೆ ಎಂಟ್ರಿ ಕೊಡ್ತಾ ಇರೋ ಸ್ಪರ್ಧಿ ಧರ್ಮ ಕೀರ್ತಿರಾಜ್‌. ಧರ್ಮ ಅಂದಾ ಕ್ಷಣ ನೆನಪಾಗೋದೇ ಈ ಹಾಡು. ಕಣ್ ಕಣ್ಣ ಸಲಿಗೇ.. ಈ ಹಾಡು ಮತ್ತು ಹಲವು ಸಿನಿಮಾಗಳಿಂದ ಖ್ಯಾತಿಗಳಿಸಿರೋ ಧರ್ಮ ಕೀರ್ತಿರಾಜ್‌. ಸಿನಿಮಾ ಇಂಡಸ್ಟ್ರಿಯ ಹೀರೋ ಕ್ಯಾಟಗರಿಯಲ್ಲಿ ಬಿಗ್‌ಬಾಸ್‌ಗೆ ಸ್ಥಾನ ಪಡೆದಿದ್ದಾರೆ.

ಇನ್ನೂ, ಉಗ್ರಂ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಳನಾಯಕನಾಗಿ ಮಿಂಚುತ್ತಿರೋ ನಟ ಮಂಜುನಾಥ್ ಗೌಡ ಕೂಡ ಈ ಬಾರಿಯ ಬಿಗ್​ಬಾಸ್​​ಗೆ ಎಂಟ್ರಿ ಕೊಡುತ್ತಿದ್ದಾರೆ. ಇವರು ಉಗ್ರಂ ಮಂಜು ಅಂತಾನೇ ಸಖತ್​ ಫೇಮಸ್​ ಆಗಿದ್ದಾರೆ. ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬಳಿಕ ಯಾವ ರೀತಿ ಕಮಾಲ್​ ಮಾಡ್ತಾರೆ ಅಂತ ಕಾದು ನೋಡಬೇಕಿದೆ.


Share to all

You May Also Like

More From Author