ಕಲುಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಸೆಕ್ಸ್ ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ನಡೆದಿದೆ. ನಾಗಮ್ಮ (42) ಕೊಲೆಯಾದ ಮಹಿಳೆ. ಶೇಖಪ್ಪ ಕೊಲೆ ಮಾಡಿದ ಆರೋಪಿ.
ತನಿಖೆ ನಡೆಸಿದಾಗ, ನಾಗಮ್ಮಳ ಪತಿ ಶೇಖಪ್ಪ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದನು. ಆದರೆ, ಪ್ರತಿನಿತ್ಯ ಕಂಠಪೂರ್ತಿ ಕುಡಿದು ಬಂದು ಪತ್ನಿ ಹಾಗೂ ಮಕ್ಕಳಿಗೆ ಕಿರುಕುಳ ಕೊಡುತ್ತಿದ್ದನು. ಆರೋಪಿ ಶೇಖಪ್ಪಗೆ ಇಬ್ಬರು ಪತ್ನಿಯರಿದ್ದು, ಪತಿಯ ಕಿರುಕುಳ ತಾಳಲಾರದೆ ಎರಡನೇ ಪತ್ನಿ ತವರು ಸೇರಿದ್ದಳು. ಇತ್ತ ನಾಗಮ್ಮಳ ನಡುವಳಿಕೆ ಬಗ್ಗೆ ಶೇಖಪ್ಪ ಅನುಮಾನ ಹೊಂದಿದ್ದನು.
ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶೇಖಪ್ಪ ಆರೋಪ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತಿದ್ದ ನಾಗಮ್ಮ ಕೆಲದಿನಗಳ ಹಿಂದಷ್ಟೆ ಊರಾಚೆ ಮನೆ ಮಾಡಿ ಮಕ್ಕಳ ಜೊತೆ ವಾಸವಾಗಿದ್ದಳು ಸಂಬಂಧಿಕರು ಸಂಧಾನ ಮಾಡಿ, ನಾಗಮ್ಮಳನ್ನು ಪತಿ ಶೇಖಪ್ಪನ ಮನೆಗೆ ಕರೆದುಕೊಂಡು ಬಂದಿದ್ದಾರೆ. ಅದೇ ದಿನ ಶೇಖಪ್ಪ ರಾತ್ರಿಯಿಂದ ಎರಡು ಬಾರಿ ಸೆಕ್ಸ್‌ಗೆ ಒತ್ತಾಯ ಮಾಡಿದ್ದ.
ಆದರೆ ಎರಡೂ ಬಾರಿಯೂ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ನಿನ್ನನ್ನು ಕೊಚ್ಚಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವೇಳೆ ಕೊಚ್ಚಿ ಹಾಕು ನೋಡೋಣ ಎಂದು ಪತ್ನಿ ಹೇಳಿದ್ದಾಳೆ. ಆಗ ಶೇಖಪ್ಪ ಕೆರಳಿ ಪತ್ನಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ತಾನಾಗಿಯೇ ಸರೆಂಡರ್ ಆಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಸದ್ಯ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.