ಬೆಂಗಳೂರು: ಕೇಂದ್ರ ಸಂಪುಟದ 29 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ʼಗಳಿವೆ. ಅವರು ರಾಜೀನಾಮೆ ಕೊಡ್ಬೇಕಲ್ವಾ? ಎಂದು ಸಚಿವ ಸಂತೋಷ್ ಲಾಡ್ ಕೌಂಟರ್ ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, . ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಹಿಂದಿರುಗಿಸಿದ್ದಾರೆ. ಅದರಲ್ಲಿ ತಪ್ಪೇನಿದೆ. ಮರ್ಯಾದೆಗೋಸ್ಕರ ಸೈಟ್ ಮರಳಿ ಕೊಟ್ಟಿದ್ದು ಅದಕ್ಕೆ ಯೂಟರ್ನ್ ಎಂದು ಹೇಳುವುದಕ್ಕೆ ಬರುವುದಿಲ್ಲ.
ಮುಡಾ ಸೈಟು ಕೊಟ್ಟಿದ್ದೇ ಬಿಜೆಪಿ ಅವರು. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದ ಸಂದರ್ಭದಲ್ಲಿ ಸೈಟ್ ಕೊಟ್ಟಿದ್ದು, ಬಿಜೆಪಿಯ ಒತ್ತಡಕ್ಕೆ ಸೈಟ್ ಕೊಟ್ಟಿದ್ದು, ಇದು ಮರ್ಯಾದೆಯ ವಿಷಯವಾಗಿದೆ. ಸಿಎಂ ಅವರ ಪತ್ನಿಯ ಬಗ್ಗೆ 40 ವರ್ಷದಿಂದ ನನಗೆ ಗೊತ್ತು ಆದ್ದರಿಂದ ವಾಪಾಸ್ ಕೊಟ್ಟಿದ್ದಾರೆ. ವಾಪಸ್ಸು ಕೊಡಬಾರದು ಎಂದು ಎಲ್ಲಾದರೂ ರೂಲ್ಸ್ ಇದೆಯೇ ಅವರು ಪ್ರಶ್ನೆ ಮಾಡಿದ್ದು, ಅದು ನಮ್ಮ ಇಷ್ಟ ಯಾವಾಗಲಾದರೂ ವಾಪಸ್ಸು ಕೊಡುತ್ತೆವೆ ಎಂದಿದ್ದಾರೆ.
ಇಡಿ ಬಳಕೆ ಮಾಡಿಕ್ಕೊಂಡು ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ಬಿಜೆಪಿ ಅವರು ಕೇಂದ್ರದಲ್ಲಿ 29 ಜನ ಕ್ಯಾಬಿನೆಟ್ ಸಚಿವರ ಮೇಲೆ ಕ್ರಿಮಿನಲ್ ಕೇಸ್, ಕೊಲೆ ಕೇಸ್, ರೇಪ್ ಕೇಸ್‌ಗಳು ಇವೆ. ಅವರು ರಾಜೀನಾಮೆ ಕೊಡೋದು ಬೇಡ್ವಾ ಹಾಗಾದ್ರೆ, ಕೇಂದ್ರ ಸಚಿವ ಕುಮಾರಸ್ವಾಮಿ ಮೆಲೆ ಕೇಸ್ ಇದೆ ಅವರು ರಾಜೀನಾಮೆ ಕೊಡೋದು ಬೇಡವೇ ಎಂದು ಸಂತೋಷ ಲಾಡ್ ಅವರು ಮೇಲೆ ಗರಂ ಆಗಿದ್ದಾರೆ.