ಮನೆಗಳ ದರೋಡೆಕೋರನ ಮೇಲೆ ಪೋಲೀಸ ಪೈರಿಂಗ್. ಪಿಎಸ್ಐ ಹಾಗೂ ಓರ್ವ ಪೋಲೀಸನಿಗೂ ಗಾಯ.ಕಿಮ್ಸ್ ಆಸ್ಪತ್ರೆಗೆ ದಾಖಲು.
ಹುಬ್ಬಳ್ಳಿ:- ಮನೆಗಳನ್ನೇ ಟಾರ್ಗೇಟ್ ಮಾಡಿಕೊಂಡು ದರೋಡೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹುಬ್ಬಳ್ಳಿಯ ಗೋಕುಲ ಪೋಲೀಸರು ಪೈರಿಂಗ್ ಮಾಡಿದ್ದಾರೆ.
ಐದಾರು ಜನ ಸೇರಿಕೊಂಡು ಗೋಕುಲ ಗ್ರಾಮದ ಬಳಿ ಮನೆಗಳ ದರೋಡೆ ಮಾಡುತ್ತಿದ್ದಾಗ ಗೋಕುಲ ಪೋಲೀಸರು ಬಲೆ ಬೀಸಿದ್ದಾರೆ.ದರೋಡೆಕೋರರ ಗುಂಪಿನಲ್ಲಿ ಮಹೇಶ ಸೀತಾರಾಮ ಕಾಳೆ ಎಂಬಾತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪಿಎಸ್ಐ ಸಚಿನ್ ದಾಸರೆಡ್ಡಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾನೆ.
ಗಾಯಗೊಂಡ ಪಿಎಸ್ಐ ಹಾಗೂ ಓರ್ವ ಪೋಲೀಸ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿದ್ದಾರೆ.ಆರೋಪಿ ಸಹ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಭೇಟಿ ನೀಡಿ ಗಾಯಗೊಂಡ ಪೋಲೀಸರ ಆರೋಗ್ಯ ವಿಚಾರಿಸಿದರು.