ಹುಬ್ಬಳ್ಳಿ.
ಜನರ ಮದ್ಯೆ ಇದ್ದು ಕೆಲಸ ಮಾಡುವ ಒಂದು ಒಳ್ಳೆಯ ನಿಗಮ ಮಂಡಳಿ ಕೊಡಿ ಎಂದು ಸಿಎಂ ಅವರಲ್ಲಿ ಮನವಿ ಮಾಡಿರುವುದಾಗಿ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ ಒಳ್ಳೆ ನಿಗಮ ಮಂಡಳಿ ಕೊಡಬೇಕು ಅನ್ನೋದು ನಮ್ಮ ಸಮಾಜದ ಬೇಡಿಕೆಯಾಗಿದೆ.ನಮ್ಮ ಸಮಾಜದ ಮುಖಂಡರು ಈಗಾಗಲೇ ಬೆಂಗಳೂರಿಗೆ ತೆರಳಿ ಸಿಎಂ ಅವರಿಗೆ ಮನವಿ ಕೊಟ್ಟಿದ್ದಾರೆ. ಬಾಂಬೆ ಕರ್ನಾಟಕ ಕ್ಕೆ ಶಂಕರಾನಂದ ಅವರ ಮಗ ಓಂಪ್ರಕಾಶ್ ಅವರಾದ ಮೇಲೆ ಪ್ರಾತಿನಿದ್ಯ ಸಿಕ್ಕಿಲ್ಲಾ. ಆ ಹಿನ್ನೆಲೆಯಲ್ಲಿ ಪ್ರಾತಿನಿದ್ಯ ಸಿಗಬೇಕು ಅನ್ನೋದು ಬೇಡಿಕೆಯಾಗಿದೆ.ನನಗೆ ಮಂತ್ರಿ ಸ್ಥಾನ ಸಿಗಬೇಕಿತ್ತು.ಆದರೆ ನಮ್ಮ ಸಮುದಾಯದ ಬಹಳ ಜನ ಸೀನಿಯರ್ ಗಳು ಇರೋದ್ರಿಂದ ಮಂತ್ರಿ ಸ್ಥಾನ ಸಿಗಲಿಲ್ಲಾ. ಈಗಾಗಲೇ ಸಿಎಂ ಒಳ್ಳೆ ನಿಗಮ ಮಂಡಳಿ ಕೊಡತೇನಿ ಅಂತಾ ಹೇಳಿದ್ದಾರೆ.ಹೈಕಮಾಂಡ ಏನ ನಿರ್ಣಯ ಕೊಡುತ್ತೇ ಅದಕ್ಕೆ ನಾನು ಬದ್ಧ.
ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲಾ.ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಒಗ್ಗಟ್ಟಾಗಿ ಕೆಲಸ ಮಾಡತಿದ್ದಾರೆ.ಜಿ.ಪರಮೇಶ್ವರ ಅವರ ಮನೆಯಲ್ಲಿ ಔತಣಕೂಟ ವಿಚಾರ ಅದನ್ಯಾಕೆ ದೊಡ್ಡದು ಮಾಡ್ತೀರಿ ಅದೆಲ್ಲ ಸಹಜ.ಜಾರಕಿಹೊಳಿ ನಮ್ಮ ಭಾಗದ ದೊಡ್ಡ ಲೀಡರ್ ಅವರು ಪ್ರವಾಸಕ್ಕೆ ಹೋದರೆ ತಪ್ಪೇನು.ಅವರು ಪ್ರವಾಸಕ್ಕೆ ಹೋಗೋದು ನನ್ನ ಗಮನಕ್ಕೆ ಇಲ್ಲಾ.ಜಾರಕಿಹೊಳಿ ಅವರ ಜೊತೆ ಮಾತಾಡ್ತೇನಿ ಎಂದು ಅಬ್ಬಯ್ಯ ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ