ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಕವಿತಾಗೌಡ ಅವರು, ಮಗುವಿನ ಫೋಟೋ ರಿವಿಲ್ ಮಾಡಿದ್ದಾರೆ.
ಸ್ವತಃ ಕವಿತಾ ಗೌಡ ಅವರೇ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಒಂದೇ ಗಂಟೆಗೆ ಸಾವಿರಾರು ಲೈಕ್ಸ್ನ ಈ ಫೋಟೋ ಪಡೆದುಕೊಂಡಿದೆ.
ಚಂದನ್ ಹಾಗೂ ಕವಿತಾ ಒಂದೇ ಧಾರಾವಾಹಿಯಲ್ಲಿ ನಟಿಸಿದವರು. ಈ ಮೊದಲು ಪ್ರಸಾರ ಕಾಣುತ್ತಿದ್ದ ‘ಲಕ್ಷ್ಮೀ ಬಾರಮ್ಮ’ದಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ನಂತರ ಮದುವೆ ಆಗುವ ನಿರ್ಧಾರ ತೆಗೆದುಕೊಂಡರು.
ಕವಿತಾ ಗೌಡ ಅವರು ಕೊವಿಡ್ ಸಂದರ್ಭದಲ್ಲಿ ಚಂದನ್ ಕುಮಾರ್ನ ವಿವಾಹ ಆದರು. ಇವರ ಮದುವೆಗೆ ಆಪ್ತರಷ್ಟೇ ಹಾಜರಿ ಹಾಕಿದ್ದರು. ಇತ್ತೀಚೆಗೆ ಹೆಣ್ಣು ಮಗು ಜನಿಸಿದ ಬಗ್ಗೆ ದಂಪತಿ ಮಾಹಿತಿ ನೀಡಿದ್ದರು. ಇಬ್ಬರೂ ಬಣ್ಣದ ಲೋಕದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ.
ಕೆಲವು ಸೆಲೆಬ್ರಿಟಿಗಳು ಮಕ್ಕಳ ಮುಖವನ್ನು ರಿವೀಲ್ ಮಾಡೋಕೆ ಇಷ್ಟಪಡುವುದಿಲ್ಲ. ಆದರೆ, ಕವಿತಾ ಗೌಡ ಹಾಗೂ ಚಂದನ್ ಆ ರೀತಿ ಅಲ್ಲ. ಅವರು ಮಗುವಿನ ಮುಖವನ್ನು ಎಲ್ಲರಿಗೂ ತೋರಿಸಿದ್ದಾರೆ.