ವೀಕ್ಷಕರು ಬಿಗ್ ಬಾಸ್ ಕಾರ್ಯಕ್ರಮವನ್ನು ಅಷ್ಟು ಇಷ್ಟ ಪಟ್ಟು ಟಿವಿ ಮುಂದೆ ಕೂತು ನೋಡ್ತಾರೆ ಅಂದ್ರೆ ಅದಕ್ಕೆ ಕಾರಣ ಕಿಚ್ಚ ಸುದೀಪ್. ಅವರ ಮಾತಿನ ಹಿಡಿತ. ನಡೆಯುವಾಗ ಗಾಂಭೀರ್ಯ, ಶೋ ನಡೆಸಿಕೊಡುವ ಪರಿ ಎಲ್ಲವೂ ಅದ್ಭುತವಾಗಿ ಇದೆ.
ಆದರೆ ದಿಢೀರ್ ಅಂತ ಶೋಗೆ ನಿರೂಪಣೆ ಮಾಡದಿರಲು ಕಿಚ್ಚ ಸುದೀಪ್ ನಿರ್ಧಾರ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿದೆ.
ಕಿಚ್ಚ ಸುದೀಪ್ ಅವರು ಏಕಾಏಕಿ ‘ಬಿಗ್ ಬಾಸ್’ ನಿರೂಪಣೆಯಿಂದ ಕೆಳಕ್ಕೆ ಇಳಿಯೋ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಅನೌನ್ಸ್ಮೆಂಟ್ ಸಾಕಷ್ಟು ಶಾಕಿಂಗ್ ಎನಿಸಿದೆ. ಅವರು ಏಕಾಏಕಿ ಬಿಗ್ ಬಾಸ್ ತೊರೆಯೋ ಹಿಂದೆ ಒಂದು ದೊಡ್ಡ ಕಾರಣ ಇದೆ ಎಂದು ವರದಿ ಆಗಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ನ 10 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಅವರು ಈಗ ನಿರೂಪಣೆ ಮಾಡುತ್ತಿರುವುದು 11ನೇ ಸೀಸನ್. ಅವರು ‘ಬಿಗ್ ಬಾಸ್’ನ ತೊರೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರು ಈ ಘೋಷಣೆ ಮಾಡುವುದರ ಹಿಂದೆ ಯಾವುದೋ ಒಂದು ಬಲವಾದ ಕಾರಣವೇ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.
ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೆ ನಿಮ್ಮ ಆಟಕ್ಕೆ ಸುದೀಪ್ ನಿರೂಪಣೆ ನಿಲ್ಲಿಸಬೇಕಾಯಿತು. ಅವರಿಗೆ ಮಾಡಿದ ಅವಮಾನ ಸಹಿಸುವುದಿಲ್ಲ. ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕರೇ ಮೊದಲು ಬಿಗ್ ಬಾಸ್ ಬಿಡಿ, ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ’ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರ. ಕನ್ನಡದ ಪರವಾಗಿ ಅವರು ಧ್ವನಿ ಎತ್ತುತ್ತಾರೆ. ಅವರು ಈ ಮೊದಲು ಬಿಗ್ ಬಾಸ್ಗೂ ಹೋಗಿ ಬಂದಿದ್ದಾರೆ. ಹೀಗಾಗಿ, ಅವರ ಜನಪ್ರಿಯತೆ ಹೆಚ್ಚಿದೆ. ಅಸಲಿಗೆ ಬಿಗ್ ಬಾಸ್ನಲ್ಲಿ ಏನಾಯ್ತು? ಅಲ್ಲಿ ನಡೆದ ಘಟನೆ ಏನು ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಇಂದು ರೂಪೇಶ್ ರಾಜಣ್ಣ ಈ ಬಗ್ಗೆ ಘೋಷಣೆ ಮಾಡೋ ಸಾಧ್ಯತೆ ಇದೆ.