ಬಿಗ್ ಬಾಸ್ ಕನ್ನಡ ಸೀಸನ್ 11 ಮೂರನೇ ವಾರಕ್ಕೆ ಕಾಲಿಟ್ಟಿದ್ದು ಕುತೂಹಲ ಕೆರಳಿಸುತ್ತಿದೆ. ಈ ವಾರ ದೊಡ್ಮನೆಯಲ್ಲಿ ಕೆಲ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಸದ್ಯ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದ್ದು ಬಿಗ್ ಬಾಸ್ ಇದರ ಮೂಲಕವೇ ಮಾತನಾಡುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಸ್ಪರ್ಧಿಗಳು ಎದ್ದ ತಕ್ಷಣ ಬಿಗ್ ಬಾಸ್ ಫೋನ್ ಕರೆ ಮಾಡಿದ್ದಾರೆ. ಮನೆಯ ಕ್ಯಾಪ್ಟನ್ ಶಿಶಿರ್ ಈ ಫೋನ್ ಸ್ವೀಕರಿಸಿದ್ದಾರೆ. ಅತ್ತ ಕಡೆಯಿಂದ ಬಿಗ್ ಬಾಸ್ ‘ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ನಾನು ಬ್ರೇಕ್ ತೆಗೋತಾ ಇದ್ದೇನೆ. ಏನಿದ್ದರೂ ಈ ಫೋನ್ ಮೂಲಕವೇ ಮಾತನಾಡುತ್ತೇನೆ. ಮನೆಯ ನಿಯಮ ಪಾಲಿಸುವುದು ಬಹಳ ಮುಖ್ಯ, ಅದನ್ನು ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ’ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಪ್ರಯೋಗಳು ಭಿನ್ನವಾಗಿವೆ. ಈ ವಾರ ಬಿಗ್ ಬಾಸ್ ಮನೆಗೆ ಫೋನ್ಬೂತ್ ಬಂದಿದೆ. ಈ ಫೋನ್ಬೂತ್ ಮೂಲಕ ಬಿಗ್ ಬಾಸ್ ಅವರು ಕರೆ ಮಾಡಿ ಮನೆಯವರಿಗೆ ಸೂಚನೆ ಕೊಡುತ್ತಿದ್ದಾರೆ. ವಿಶೇಷ ಎಂದರೆ ತುಕಾಲಿ ಸಂತೋಷ್ ಕರೆ ಕೂಡ ಬಂದಿದೆ.
ತುಕಾಲಿ ಸಂತೋಷ್ ಅವರು ಕರೆ ಮಾಡುತ್ತಿದ್ದಂತೆ ಭವ್ಯಾ ಅವರು ಹೋಗಿ ಕರೆ ಸ್ವೀಕರಿಸಿದರು. ‘ಹೆಲೋ, ಚಿನ್ನಿ ಯಾಕ್ ಚಿನ್ನಿ? ಐ ಲವ್ ಯೂ. ನೀನಿಲ್ಲದೆ ಇರೋಕೆ ಆಗ್ತಿಲ್ಲ’ ಎಂದರು ತುಕಾಲಿ ಸಂತೋಷ್. ಫೋನ್ನಲ್ಲಿ ಮಾತನಾಡುತ್ತಿರುವುದು ಯಾರು ಎಂಬುದನ್ನು ಕಂಡುಹಿಡಿಯೋಕೆ ಭವ್ಯಾಗೆ ಸಾಧ್ಯವೇ ಆಗಲಿಲ್ಲ. ಆ ಬಳಿಕ ಕರೆಯಲ್ಲಿರೋದು ತುಕಾಲಿ ಸಂತೋಷ್ ಎಂದು ಭವ್ಯಾಗೆ ಗೊತ್ತಾಗಿದೆ.
ಆ ಬಳಿಕ ಮಾನಸಾ ಕರೆ ಸ್ವೀಕರಿಸಿದರು. ‘ಭವ್ಯಾಗೆ ಏಕೆ ಐ ಲವ್ ಯೂ ಎಂದೆ’ ಎಂದು ಮಾನಸಾ ಹೇಳಿದರು. ಇದಕ್ಕೆ ಉತ್ತರಿಸಿದ ಅವರು, ‘ಅವಳು ನಿನಗಿಂತ ಚೆನ್ನಾಗಿ ಇದ್ದಾಳೆ. ಹೀಗಾಗಿ, ಐ ಲವ್ ಯೂ ಎಂದೆ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.