ಮುಗಿಲು ಮುಟ್ಟಿದ ಕಿಚ್ಚನ ಆಕ್ರಂದನ: ಅಮ್ಮನನ್ನು ನೆನೆದು ಪತ್ರ ಬರೆದ ಸುದೀಪ್!

Share to all

ನಟ ಸುದೀಪ್ ತಾಯಿ ಸರೋಜ ಅವರು ಇಹಲೋಕ ತ್ಯಜಿಸಿದ್ದಾರೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸುದೀಪ್ ತಾಯಿಯ ಅಂತ್ಯಕ್ರಿಯೆ ನೆರವೇರಿದೆ. ಇನ್ನೂ ತಮ್ಮ ತಾಯಿ ನಿಧನದ ಬಳಿಕ ಪ್ರೀತಿಯ ಅಮ್ಮನನ್ನು ನೆನೆದು ಭಾವುಕರಾಗಿ ಸುದೀಪ್ ಪತ್ರ ಬರೆದಿದ್ದಾರೆ. ಹೌದು ಅಮ್ಮ ಆಸ್ಪತ್ರೆ ಸೇರಿದ ದಿನ ಕಿಚ್ಚ ಬಿಗ್ ಬಾಸ್ ಶೂಟಿಂಗ್ ಮಾಡ್ತಿದ್ದರು.

ಅಮ್ಮನ ಬಗ್ಗೆ ವಿಚಾರಿಸಿಕೊಂಡೇ ಕಿಚ್ಚ ಸುದೀಪ್ ಅಂದು ವೇದಿಕೆ ಹತ್ತಿದ್ದರು. ಅಮ್ಮನ ಸ್ಥಿತಿ ಗಂಭೀರ ಅನ್ನೋ ಸಂದೇಶ ಬರ್ತನೇ ಇತ್ತು. ಆದರೂ, ಅಮ್ಮ ಕಲಿಸಿದ ಆ ಪಾಠ ನೆನಪಿತ್ತು. ಅದನ್ನ ಮರೆಯದೇ ಕೆಲಸ ಮುಂದುವರೆಸಿದೆ. ಶೂಟಿಂಗ್ ಮಧ್ಯೆ ಅಮ್ಮನ ಬಗ್ಗೆ ಮನದಲ್ಲಿ ನೋವು ಸುಳಿಯುತ್ತಲೇ ಇತ್ತು. ಆದರೂ ಶೂಟಿಂಗ್ ಮುಗಿಸಬೇಕಿತ್ತು. ಶನಿವಾರದ ಎಪಿಸೋಡ್ ಮುಗಿಸಿದೆ.

ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಹೋದೆ. ಆದರೆ, ನಾನು ಹೋಗೋ ಕೆಲವು ಗಂಟೆ ಮೊದಲು ಅಮ್ಮ ವೆಂಟಿಲೇಷನ್‌ನಲ್ಲಿಯ ಇದ್ದಳು. ಆದರೆ, ಅಮ್ಮನನ್ನ ನಾನು ಹೀಗೆ ಎಂದೂ ನೋಡಿಯೇ ಇರಲಿಲ್ಲ..ಅಮ್ಮ ನನ್ನ ಜೀವನದಲ್ಲಿ ಎಲ್ಲವೂ ಆಗಿದ್ದಳು. ಪ್ರತಿ ದಿನ ನನ್ನ ಫೋನ್‌ಗೆ ಒಂದು ಸಂದೇಶ ಬರ್ತಾ ಇತ್ತು ಗುಡ್ ಮಾರ್ನಿಂಗ್ ಕಂದ ಅನ್ನೋ ಸಂದೇಶ ಅದಾಗಿತ್ತಿತ್ತು. ಆದರೆ, ಅಕ್ಟೋಬರ್ 18 ರಂದೇ ಒಂದು ಒಂದು ಸಂದೇಶ ಬಂತು. ಅದೇ ಕೊನೆ ನೋಡಿ. ಅಮ್ಮನ ಸಂದೇಶ ಇನ್ಮುಂದೆ ಬರೋದೇ ಇಲ್ಲ.

ಅಮ್ಮನ ಎಂದೂ ಆ ಒಂದು ಸ್ಥಿತಿಯಲ್ಲಿ ನೋಡಿಯೇ ಇಲ್ಲ. ಆದರೆ, ಈಗೀನ ಸ್ಥಿತಿ ನನಗೆ ನಿಜಕ್ಕೂ ಹೊಸದೇ ಆಗಿದೆ. ಇದನ್ನ ಅರ್ಥ ಮಾಡಿಕೊಳ್ಳಲು ಮನಸು ಕಷ್ಟಪಡುತ್ತಿದೆ. ಅಮ್ಮನ ನನ್ನ ಜೀವನದಲ್ಲಿ ಒಂದು ಅಮೂಲ್ಯ ರತ್ನವೇ ಆಗಿದ್ದಳು. ಈಕೆ ಇಲ್ಲದೇ ಜೀವನ ಹೇಗೆ ಅನ್ನೋ ಸಣ್ಣ ನೋವು ಕಾಡುತ್ತಿದೆ.

 ಅಮ್ಮ ಕೊಡ್ತಿದ್ದಳು ಟೈಟ್ ಹಗ್

ಪ್ರತಿ ದಿನ ಶೂಟಿಂಗ್ ಹೋಗೋ ಮೊದಲು ಅಮ್ಮ ಒಂದು ಟೈಟ್ ಹಗ್ ಕೊಡ್ತಿದ್ದಳು. ಆ ಟೈಟ್ ಹಗ್ ಇನ್ಮುಂದೆ ಇರೋದೇ ಇಲ್ಲ. ಅಮ್ಮ ಹೋಗಿಬಿಟ್ಳು….ಅಮ್ಮ ಇಲ್ಲದ ನೋವು ಕಾಡುತ್ತಲೇ ಇದೆ. ಅಮ್ಮನ ನನಗೆ ಟೀಸರ್ ಆಗಿದ್ದಳು. ಅಮ್ಮ ನನಗೆ ಎಲ್ಲವೂ ಆಗಿದ್ದಳು. ಈಕೆಯ ಇಲ್ಲದ ನೋಡು ಕಾಡುತ್ತಿದೆ ಅಂತಲೇ ಸುದೀಪ್ ಸುದೀರ್ಘ ಪತ್ರ ಬರೆದ್ದಾರೆ.


Share to all

You May Also Like

More From Author