ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ನಿನ್ನೆ ಬಿಗ್ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿಗಳು ಆಚೆ ಬಂದಿದ್ದಾರೆ. ಲಾಯರ್ ಜಗದೀಶ್ ಹಾಗೂ ರಂಜಿತ್ ಬಿಗ್ಬಾಸ್ ಮನೆಯಿಂದ ನೇರವಾಗಿ ಮುಖ್ಯ ದ್ವಾರದಿಂದ ಹೊರ ಬಂದಿದ್ದಾರೆ. ಇದರ ಬೆನ್ನಲ್ಲೇ ದೊಡ್ಮನೆ ಈಗ ರಾಜಕೀಯ ರಣರಂಗವಾಗಿ ಬದಲಾಗಿದೆ.
ರಾಜಕೀಯದಾಟದಲ್ಲಿ ಯಾರೂ ಗೆಲ್ತಾರೆ ಎಂಬುದೇ ಬಹಳಮುಖ್ಯ. ಎರಡು ರಾಜಕೀಯ ಪಕ್ಷಗಳಾಗಿ ವಿಂಗಡಿಸಿರುವ ಬಿಗ್ ಬಾಸ್ ಒಂದಕ್ಕೆ ಪ್ರಾಮಾಣಿಕ ‘ಸಮರ್ಥರ ನ್ಯಾಯವಾದಿ ಪಕ್ಷ’ ಹಾಗೂ ಎರಡನೆಯದು ‘ಧರ್ಮ ಸೇನಾ ಪಕ್ಷ’ ಎಂದು ಹೆಸರು ನೀಡಿದೆ.
ಯಾವ ಆಟವನ್ನೇ ಕೊಟ್ರು ರಾಜಕೀಯ ಮಾಡೋ ಮನೆಯಲ್ಲಿ ರಾಜಕೀಯವನ್ನೇ ಆಟವನ್ನಾಗಿ ಮಾಡಿದರೆ ಇನ್ನೆಷ್ಟು ರಾಜಕೀಯ ಮಾಡ್ತಾರೆ ಎಂಬುದನ್ನು ನೋಡಬೇಕಿದೆ. ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸೌಧವಾಗಿ ಮಾರ್ಪಾಡಾಗಿದೆ. ಎಲ್ಲರೂ ರಾಜಕಾರಣಿಗಳ ಅವತಾರ ತಾಳಿದ್ದಾರೆ.