ಮೈಸೂರು: ಸಿ.ಪಿ.ಯೋಗೇಶ್ವರ್ ಸೈನಿಕ ಕುಲಕ್ಕೆ ಅಪಮಾನ, ಅವನೊಬ್ಬ ಫ್ರಾಡ್ ಎಂದು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಿ.ಪಿ.ಯೋಗೇಶ್ವರ್ ವಿಚಾರವಾಗಿ ಮಾತನಾಡಿದ್ದು, ಮಾಜಿ ಎಂಎಲ್ಸಿ ಯೋಗೇಶ್ವರ್ನನ್ನು ಸೈನಿಕ ಅಂತಾ ಕರೆಯಬಾರದು. ಸಿ.ಪಿ.ಯೋಗೇಶ್ವರ್ ಸೈನಿಕ ಕುಲಕ್ಕೆ ಅಪಮಾನ,
ಅವನೊಬ್ಬ ಫ್ರಾಡ್. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲ ಪಕ್ಷದವರೂ ಕರೆಯುತ್ತಿದ್ದಾರೆ. ಅವನೊಬ್ಬ ದೊಡ್ಡ ಲೀಡರ್ ಅಂತಾ ಎಲ್ಲರೂ ಕರೆಯುತ್ತಿದ್ದೀರಾ? ಸಿಎಂ ಅವರೇ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಏಕೆ ಹಾಳು ಮಾಡ್ತಿದ್ದೀರಿ? ಸರ್ಕಾರ ಈಗಾಗಲೇ ಮುಡಾ, ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಿಲುಕಿದೆ ಇದರ ನಡುವೆ ಇನ್ನೊಬ್ಬ ಫ್ರಾಡ್ ಸೇರಿಸಿಕೊಂಡಿದ್ದೀರಿ ಎಂದಿದ್ದಾರೆ.