ಬಿಗ್ ಬಾಸ್ ಸೀಸನ್ 11 ಸಾಕಷ್ಟು ಕುತೂಹಲದಿಂದ ಮೂಡಿ ಬರುತ್ತಿದೆ. ಕರ್ನಾಟಕದ ಕ್ರಷ್ ಎಂದು ಕೇವಲ ಮೂರೇ ವಾರದಲ್ಲಿ ಹೆಸರು ಮಾಡಿದ್ದ ಜಗದೀಶ್ ಮನೆಯಿಂದ ಹೋದ ಬಳಿಕ, ಮನೆ ಕೊಂಚ ಡಲ್ ಆಗಿದ್ದೂ, ನಿಜ ಅವರ ರೀಪ್ಲೇಸ್ ಗೆ ಹನುಮಂತರನ್ನು ಕರೆಸಲಾಗಿದೆ.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹೆಚ್ಚು ಕ್ಲೋಸ್ ಆಗಿ ಇದ್ದಿದ್ದು ಸುರೇಶ್ ಜೊತೆ ಮಾತ್ರ. ಸುರೇಶ್ ಕೂಡ ಜಗದೀಶ್ ಜೊತೆ ಉತ್ತಮವಾಗಿಯೇ ಇದ್ದರು. ಆದರೆ, ದಿನ ಕಳೆದಂತೆ ಜಗದೀಶ್ ವರ್ತನೆ ಸುರೇಶ್ಗೆ ಇಷ್ಟ ಆಗಲೇ ಇಲ್ಲ. ಹೀಗಾಗಿ ಅಂತರ ಕಾಯ್ದುಕೊಂಡರು. ಹಂಸಾ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದರು ಎಂಬುದನ್ನು ಕೂಡ ಎಲ್ಲರಿಗೂ ತಿಳಿಸಿದ್ದು ಇದೇ ಸುರೇಶ್. ಈಗ ಹಂಸಾ ಜೊತೆ ಅವರಿಗೆ ಅಸಮಾಧಾನ ಭುಗಿಲೆದ್ದಿದೆ.
ಕಿಚನ್ನ ಕ್ಲೀನಿಂಗ್ಗೆ ಹಂಸಾ ಹಾಗೂ ಸುರೇಶ್ನ ನೇಮಕ ಮಾಡಿದ್ದರು ಕ್ಯಾಪ್ಟನ್ ಐಶ್ವರ್ಯಾ. ಆದರೆ, ಇದು ಸುರೇಶ್ಗೆ ಇಷ್ಟ ಆಗಿಲ್ಲ. ಈ ಕಾರಣಕ್ಕೆ ಅವರು ‘ಹಂಸಾ ಜೊತೆಗಿದ್ದರೆ ನಾನು ಕ್ಲೀನಿಂಗ್ ಮಾಡಲ್ಲ’ ಎಂದರು. ಆ ಬಳಿಕ ಸುರೇಶ್ ಹಠ ನೋಡಿ ಹೆದರಿದ ಐಶ್ವರ್ಯಾ ಅವರು ಹಂಸನ ಜಾಗಕ್ಕೆ ಧನರಾಜ್ ಅವರನ್ನು ಕರೆತಂದರು. ಆ ಬಳಿಕವೇ ಸುರೇಶ್ ಕೆಲಸ ಮಾಡೋಕೆ ಒಪ್ಪಿದರು.
ಸುರೇಶ್ ಅವರು ಈ ರೀತಿ ಮಾಡೋಕೂ ಒಂದು ಕಾರಣ ಇದೆ. ‘ನನ್ನ ಕಪ್ನ ಎಲ್ಲರೂ ಬಳಸುತ್ತಾರೆ. ಈ ಕಾರಣಕ್ಕೆ ನನ್ನ ಕಪ್ ಮೇಲೆ ಲಿಪ್ಸ್ಟಿಕ್ ಇರುವಂತೆ ನೋಡಿಕೊಂಡೆ. ಇದಕ್ಕೆ ಸುರೇಶ್ ಸಿಟ್ಟಾಗಿದ್ದಾರೆ. ನಿಮ್ಮ ಕಪ್ಗೆ ಲಿಪ್ಸ್ಟಿಕ್ ಬಡಿಡಿದೆ ಕ್ಲೀನ್ ಮಾಡಿ ಎಂದು ಹೇಳಿದ್ದರೆ ಮುಗಿದಿತ್ತು’ ಎಂಬ ಅಭಿಪ್ರಾಯವನ್ನು ಹಂಸಾ ವ್ಯಕ್ತಪಡಿಸಿದ್ದಾರೆ ಜಗದೀಶ್ ಅವರು ಇದ್ದಿದ್ದರೆ ಹಂಸಾ ಜೊತೆ ಮತ್ತಷ್ಟು ಕ್ಲೋಸ್ ಆಗುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ.