ಬಿಗ್ ಬಾಸ್ ಸೀಸನ್ 11 ರಲ್ಲಿ ಕಳೆದ ವಾರ ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿ ಇಬ್ಬರು ನಾಮಿನೇಟ್ ಆದರು. ಅದರಂತೆ ಈ ವಾರವೂ ಡಬಲ್ ಎಲಿಮಿನೇಷನ್ ನಡೆಯಲಿದೆ ಎನ್ನಲಾಗುತ್ತಿದೆ. ಐಶ್ವರ್ಯ ಹಾಗೂ ತ್ರವಿಕ್ರಂ ಈ ವಾರದ ಕ್ಯಾಪ್ಟನ್ ಆಗಿರುವ ಕಾರಣ ಅವರು ಸೇಫಾಗಿದ್ದಾರೆ. ಇಲ್ಲವಾದರೆ ಅವರೂ ಸಹ ಈ ನಾಮಿನೇಷನ್ ಪಟ್ಟಿಯಲ್ಲಿ ಇರುವ ಸಾಧ್ಯತೆ ಇತ್ತು. ಇನ್ನು ಧನರಾಜ್ ಆಚಾರ್ ಹಾಗೂ ಹನುಂತ ಅನುಷಾ ಮತ್ತು ಧರ್ಮ ಇವರ್ಯಾರೂ ಈ ಪಟ್ಟಿಯಲ್ಲಿ ಇಲ್ಲ. ಉಗ್ರಂ ಮಂಜು ಹಾಗೂ ಮಾನಸಾ ಅವರನ್ನು ಮನೆಯ ಕ್ಯಾಪ್ಟನ್ಸ್ ನೇರ ನಾಮಿನೇಷನ್ ಮಾಡಿದ್ದಾರೆ. ಹಾಗಾಗಿ ಅವರ ಹೆಸರು ಮೊದಲಿಗಿದೆ.
ಮಾನಸಾ ಹಾಗೂ ಉಗ್ರಂ ಮಂಜು ಅವರನ್ನು ತ್ರಿವಿಕ್ರಂ ಮತ್ತು ಐಶ್ವರ್ಯ ನೇರ ನಾಮಿನೇಟ್ ಮಾಡಿದ್ದರು. ಎಲ್ಲರ ಮುಂದೆ ಸಕಾರಣ ನೀಡಿ ಅವರನ್ನು ನಾಮಿನೇಟ್ ಮಾಡಬೇಕಿತ್ತು. ಈ ರೀತಿ ನಾಮಿನೇಟ್ ಮಾಡುವಾಗ ಜಗಳ ಕೂಡ ಆಗಿತ್ತು. ನೀವು ಯಾರನ್ನಾದರೂ ಸೇಫ್ ಮಾಡಲು ಬಯಸುತ್ತೀರಾ ಎಂದಾದರೆ ಓಟಿಂಗ್ ಆಪ್ಶನ್ ನೀಡಲಾಗಿದೆ.
ಗೋಲ್ಡ್ ಸುರೇಶ್
ಚೈತ್ರಾ
ಮೋಕ್ಷಿತಾ
ಹಂಸಾ
ಗೌತಮಿ
ಶಿಶಿರ್
ಭವ್ಯಾ
ಈ ಮೇಲಿನ ಎಲ್ಲರೂ ಈ ಬಾರಿ ನಾಮಿನೇಟ್ ಆಗಿದ್ದಾರೆ
ಹಿಂದಿನ ವಾರದಲ್ಲಿ ವಾರದ ಮಧ್ಯದಲ್ಲೇ ರಂಜಿತ್ ಹಾಗೂ ಲಾಯರ್ ಜಗದೀಶ್ ಅವರನ್ನು ಅನಿವಾರ್ಯವಾಗಿ ಮನೆಯಿಂದ ಹೊರಹಾಕಲಾಗಿದೆ. ಆ ಕಾರಣ ಈ ವಾರ ನಾಮಿನೇಷನ್ ಮಾಡೋದಿಲ್ವಾ? ಎಂಬ ಅನುಮಾನಗಳೂ ಆರಂಭವಾಗಿದೆ. ಕಿಚ್ಚ ಸುದೀಪ್ ಅವರು ಈ ಬಾರಿ ಶೋ ನಡೆಸಿಕೊಡಲು ಸಾಧ್ಯವಾಗದೇ ಇದ್ದರೆ ಯಾರು ನಿರೂಪಣೆ ಮಾಬಹುದು? ಎಂಬ ಅನುಮಾನವೂ ಇದೆ. ಇದೆಲ್ಲದಕ್ಕೂ ಉತ್ತರ ಕಂಡುಕೊಳ್ಳಲು ವೀಕ್ಷಕರು ಕಾತರದಿಂದ ಕಾದಿದ್ದಾರೆ.