ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ತಿಂಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಆರಂಭದಿಂದಲೂ ಕಾರ್ಯಕ್ರಮವು ವೀಕ್ಷಕರ ಗಮನವನ್ನು ಸೆಳೆಯುತ್ತಿದೆ. ಕಳೆದ ವಾರದ ಮಧ್ಯದಲ್ಲಿ ಜಗದೀಶ್ ಮತ್ತು ರಂಜಿತ್ ಎಲಿಮಿನೇಟ್ ಆದರು. ಆ ಬಳಿಕ ಮನೆಗೆ ವೀಕೆಂಡ್‌ನಲ್ಲಿ ಸಿಂಗರ್ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಪಡೆದರು. ಆಟ ಮತ್ತೆ ತಿರುವು ಪಡೆಯಿತು. ಈ ವಾರ ವೀಕೆಂಡ್ ಎಪಿಸೋಡ್ ಗೆ ಕಿಚ್ಚ ಸುದೀಪ್ ಬರುವುದಿಲ್ಲ. ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯಲಿದೆ.
ತಾಯಿಯ ನಿಧನದಿಂದ ನೊಂದಿರುವ ಕಿಚ್ಚ ಸುದೀಪ್ಈ ವಾರ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಜಾಗಕ್ಕೆ ಈ ವಾರ ಬೇರೆ ಕಲಾವಿದರು ಶೋ ನಡೆಸಿಕೊಡಲಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ಶನಿವಾರದ ಪ್ರೋಮೊ ರಿಲೀಸ್ ಮಾಡಿದ್ದು, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳ ಜತೆ ಬೆರೆತುಕೊಂಡು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.ಸ್ಪರ್ಧಿಗಳನ್ನು ನಗಿಸುತ್ತಾ, ಅವರ ವ್ಯಕ್ತಿತ್ವದ ಬಗ್ಗೆ ಭಟ್ರು ಮಾತನಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ. ಪ್ರತಿ ಸಂಡೆ ನಡೆಯುತ್ತಿದ್ದ ಸೂಪರ್ ಸಂಡೇ ವಿತ್ ಕಿಚ್ಚ ಕೂಡ ಈ ವಾರ ಇರುವುದಿಲ್ಲ. ಭಾನುವಾರದ ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಸೃಜನ್ ಲೋಕೇಶ್ ಅವರು ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.