ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಸಿನಿಮಾದ ಮಾತುಕತೆ ಜೋರಾಗಿದೆ. ಈ ಮಾತು ಕೇಳಿ ದರ್ಶನ್ ಅಭಿಮಾನಿ ಆಗಿರುವ ಧರ್ಮ ಫುಲ್ ಖುಷ್ ಆಗಿದ್ದಾರೆ. ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರಾಂತ್ಯ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಅತಿಥಿಗಳಾಗಿ ಬಿಗ್ ಬಾಸ್‌ಗೆ ಆಗಮಿಸಿದ್ದರು. ಸೃಜನ್ ಆಗಮಿಸಿದ್ದು, ಧರ್ಮಗೆ ಖುಷಿಯಾಗಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡಿದ್ದಾರೆ.
ದೊಡ್ಮನೆಗೆ ಅತಿಥಿಯಾಗಿ ಬರುತ್ತಿದ್ದಂತೆ ಯಾರ ಪರಿಚಯ ತಮಗೆ ಮೊದಲೇ ಇದೆ ಎಂಬುದನ್ನು ಹೇಳಿದರು. ಆಗ ಧರ್ಮ ಬಳಿ ನಿಮಗೆ ಒಂದು ಗುಡ್ ನ್ಯೂಸ್ ಇದೆ ಎಂದರು ಸೃಜನ್. ‘ನವಗ್ರಹ’ ಸಿನಿಮಾ ಮತ್ತೆ ರೀ-ರಿಲೀಸ್ ಆಗುತ್ತಿದೆ. ಇದನ್ನು ಕೇಳಿ ಯಾವಾಗ ಎಂದು ಪ್ರಶ್ನೆ ಮಾಡಿದರು. ನವೆಂಬರ್ 8ಕ್ಕೆ ಎಂದು ಸೃಜನ್ ಉತ್ತರ ಕೊಟ್ಟರು. ಇದನ್ನು ಕೇಳಿ ಧರ್ಮ ಖುಷಿಪಟ್ಟರು. ಈ ಮೂಲಕ ಬಿಗ್ ಬಾಸ್ ಮನೆಯೊಳಗೂ ನವಗ್ರಹ ಚಿತ್ರದ್ದೇ ಚರ್ಚೆಯಾಗಿದೆ.