ಬಿಗ್ ಬಾಸ್ ಮನೆಯಿಂದ ನಾಲ್ಕೇ ವಾರಕ್ಕೆ ಹಂಸಾ ಅವರು ತಮ್ಮ ಜರ್ನಿ ಮುಗಿಸಿದ್ದಾರೆ. ಸುದೀಪ್ ಇಲ್ಲದ ಕಾರಣ ಈ ವಾರ ಎಲಿಮಿನೇಷನ್ ಇರಲಿದೆಯೋ ಇಲ್ಲವೋ ಎಂಬುದು ಹಲವರಿಗೆ ಅನುಮಾನ ಮೂಡಿಸಿತ್ತು. ಆದ್ರೀಗ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ.
ಮೊದಲ ವಾರವೇ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದರು. ಎರಡನೇ ವಾರ ದಸರಾ ಸಂಭ್ರಮದಲ್ಲಿ ಎಲಿಮಿನೇಷನ್ ಇರಲಿಲ್ಲ. ಮೂರನೇ ವಾರ ನಡುವೆಯೇ ಜಗದೀಶ್ ಹಾಗೂ ರಂಜಿತ್ ಮನೆಯಿಂದ ಹೊರಬರುವ ಶಿಕ್ಷೆ ಎದುರಿಸಿದ್ದರು. ನಾಲ್ಕನೇ ವಾರ ಬಿಗ್‌ಬಾಸ್ ಮನೆಯಿಂದ ಹೊರಹೋಗಲು ಮೋಕ್ಷಿತಾ, ಭವ್ಯಾ, ಚೈತ್ರಾ, ಗೌತಮಿ, ಹಂಸಾ, ಮಂಜು, ಮಾನಸಾ, ಶಿಶಿರ್ ಹಾಗೂ ಗೋಲ್ಡ್ ಸುರೇಶ್ ನಾಮಿನೇಟ್ ಆಗಿದ್ದರು. ಆದ್ರೀಗ ಓರ್ವ ಸ್ಪರ್ಧಿ ಹೊರಬಂದಿದ್ದಾರೆ.ಬಿಗ್‌ಬಾಸ್ ಮನೆಯಿಂದ ನಾಲ್ಕನೇ ವಾರ ಹಂಸ ಪ್ರತಾಪ್ ಹೊರಬಂದಿದ್ದಾರೆ.
ಈ ವಾರ ಡೇಂಜರ್ ಝೋನ್ನ ಅಂತಿಮ ಹಂತಕ್ಕೆ ಮೋಕ್ಷಿತಾ ಮತ್ತು ಹಂಸಾ ಬಂದಿದ್ದರು. ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಭಾನುವಾರ ತೋರಿಸಿರಲಿಲ್ಲ. ಆದರೆ ಸೋಮವಾರದ ಸಂಚಿಕೆಯಲ್ಲಿ ಹಂಸಾ ಎಲಿಮಿನೇಟ್ ಆಗಿರುವುದು ಸ್ಪಷ್ಟವಾಗಿದೆ.
ಪ್ರತಿ ವಾರ ಎಲಿಮಿನೇಟ್ ಆದವರನ್ನು ಕಿಚ್ಚ ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಆದರೆ ಇತ್ತೀಚೆಗೆ ಅವರ ತಾಯಿ ನಿಧನರಾದ್ದರಿಂದ ವೀಕೆಂಡ್ ಸಂಚಿಕೆ ನಡೆಸಿಕೊಡಲು ಸುದೀಪ್ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಹಂಸಾ ಅವರು ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡದೇ ಬಿಗ್ ಬಾಸ್ ಆಟವನ್ನು ಮುಗಿಸುವಂತಾಯಿತು.