ಬಿಗ್ ಬಾಸ್ ಸೀಸನ್ 11 ಎಲ್ಲಾ ಪ್ರೇಕ್ಷಕರ ಮನಗೆದ್ದಿದೆ. ಬಿಗ್ ಬಾಸ್ ಕನ್ನಡ 11ರ ಮನೆಯಲ್ಲಿ ಮನೆಗೆ ಬಂದ ಎರಡು ವಾರದಲ್ಲೇ ಎರಡು ಬಾರಿ ಹನುಮಂತ ಅವರು ಕ್ಯಾಪ್ಟನ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಹನುಮಂತ ಅವರಿಗೆ ಬಿಗ್‌ಬಾಸ್ ಜವಾಬ್ದಾರಿ ಕೊಟ್ಟು ಮನೆಯ ಕ್ಯಾಪ್ಟನ್ ಆಗಿ ಮಾಡಿದ್ದರು. ಇದೀ ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ.
ಅದರಂತೆ ಈ ವಾರದ ಕ್ಯಾಪ್ಟನ್ ಹನುಮಂತನಿಗೆ ನಾಮಿನೇಟ್ ಟಾಸ್ಕ್ ನೀಡಲಾಗಿದೆ. ಅದರಂತೆಯೇ ಹನುಮಂತ ಮೂವರ ಹೆಸರನ್ನು ತೆಗೆದುಕೊಂಡಿದ್ದು, ನಾಮಿನೇಟ್ ಮಾಡಿದ್ದಾನೆ. ಗೋಲ್ಡ್ ಸುರೇಶ್, ಮಾನಸ ಮತ್ತು ಭವ್ಯ ಗೌಡ ಅವರ ಹೆಸರನ್ನು ಆಯ್ಕೆ ಮಾಡಿದ್ದಾನೆ.
ಇದೇ ವಿಚಾರ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಹನುಮಂತ ಮೊದಲಿಗೆ ಗೋಲ್ಡ್ ಸುರೇಶ್ ಹೆಸರನ್ನು ತೆಗೆದುಕೊಂಡಿದ್ದು, ಆತ ಅಲ್ಲಲ್ಲಿ ಕೋಳಿ ಮಲಗಿಕೊಂಡಂತೆ ಮಲಗುತ್ತಾನೆ. ಭವ್ಯಾ ಗೌಡ ಯಾವುದರಲ್ಲೂ ಹೆಚ್ಚು ಭಾಗವಹಿಸಿಲ್ಲ, ಮಾನಸ ಅದೊಂತರ ಬಾಂಬ್ ಇದ್ದಂತೆ ಸೌಂಡ್ ಮಾಡುವಾಗ ಟುಸುಕ್ ಅನ್ನುತ್ತೆ ಎಂದು ಕಾರಣ ನೀಡಿದ್ದಾನೆ.
ಹನುಮಂತ ನೀಡಿದ ಕಾರಣಕ್ಕೆ ಮೂವರು ಅಸಾಮಾಧಾನರಾಗಿದ್ದಾರೆ. ಅದಲ್ಲಿ ಭವ್ಯ ನೇರವಾಗಿ ಹನುಮಂತುವಿಗೆ ನೀವು ಕೊಟ್ಟಿರುವ ಕಾರಣ ಚೆನ್ನಾಗಿಲ್ಲ ಎಂದಿದ್ದಾರೆ. ಮಾನಸ ಕಣ್ಣೀರು ಹಾಕಿದ್ದು, ನಿನ್ನಂತ ಗೇಮ್ ಪ್ಲಾನರ್ ನಮ್ ತಾಯಾಣೆ ಈ ಮನೆಯಲ್ಲಿ ಯಾರು ಇಲ್ಲ ಕಣೋ ಎಂದು ಹೇಳಿದ್ದಾರೆ