ಬೆಂಗಳೂರಿನಲ್ಲೇ ನಟ ದರ್ಶನ್ʼಗೆ ಚಿಕಿತ್ಸೆ ಅನಿವಾರ್ಯ: ಇಂದು ಮಧ್ಯಾಹ್ನ 2 ಗಂಟೆಗೆ ಖಾಸಗಿ ಆಸ್ಪತ್ರೆಗೆ ದಾಖಲು.!

Share to all

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ದೊರೆತಿರುವುದು ಸುದ್ದಿ ಮಾಡಿದೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಅವರಿಗೆ ಅವಕಾಶ ನೀಡಲಾಗಿದೆ. ಈಗ ಜೈಲಿನಿಂದ ಹೊರ ಬಂದಿರೋ ಅವರು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಬಳ್ಳಾರಿಯಿಂದ ಕಾರಿನಲ್ಲಿ ಪತ್ನಿ ಜೊತೆ ಹೊಸಕೆರೆಹಳ್ಳಿ ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ದರ್ಶನ್ ಅವರನ್ನು ನೋಡಲು ಫ್ಯಾನ್ಸ್ ನೆರೆದಿದ್ದರು. ಅವರಿಂದ ತಪ್ಪಿಸಿಕೊಂಡು ದರ್ಶನ್ ಮನೆ ಸೇರಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ದರ್ಶನ್​ ಮನೆಗೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.

ಬಳ್ಳಾರಿ ಜೈಲಿನಿಂದ ರಿಲೀಸ್ ಆದ ದರ್ಶನ್ ಅವರು ಹೈಕೋರ್ಟ್​ ವಿಧಿಸಿರೋ ಷರತ್ತಿನ ಪ್ರಕಾರ ಎಲ್ಲೆಂದರಲ್ಲಿ ಹೋಗೋ ಆಗಿಲ್ಲ. ಮೊದಲಿಗೆ ದರ್ಶನ್ ತಮ್ಮ ಆಯ್ಕೆಯ ಆಸ್ಪತ್ರೆಗೆ ಹೋಗಬೇಕು. ವೈದ್ಯಕೀಯ ಪರೀಕ್ಷೆಯನ್ನು ಮೊದಲು ಮಾಡಿಸಬೇಕಿದೆ.

ದರ್ಶನ್ ಅವರು ಜೈಲಿನಿಂದ ಹೊರ ಬಂದಿದ್ದು ವೈದ್ಯಕೀಯ ಚಿಕಿತ್ಸೆಗಾಗಿ. ಹೀಗಾಗಿ, ಅವರು ಆದಷ್ಟು ಬೇಗ ಆಸ್ಪತ್ರೆಗೆ ತೆರಳಬೇಕಿದೆ. ಇಂದು ಮಧ್ಯಾಹ್ನ ಅವರು ಆಸ್ಪತ್ರೆಗೆ ಶಿಫ್ಟ್ ಆಗೋ ಸಾಧ್ಯತೆ ಇದೆ. ಆ ಬಳಿಕ ಅವರು ವೈದ್ಯರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರು ಎಲ್ಲಿ ಬೇಕಿದ್ದರೂ ಚಿಕಿತ್ಸೆ ಪಡೆಯಲು ಅವಕಾಶ ಇದೆ.

ದರ್ಶನ್ ಚಿಕಿತ್ಸೆ ಹೊರತು ಪಡಿಸಿದಂತೆ ಸಾಕ್ಷಿದಾರರ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಿದ್ರೆ ಸಂಕಷ್ಟದಲ್ಲಿ ತಗಲಾಕಿಕೊಳ್ಳೊದು ಪಕ್ಕಾ. ಆದ್ದರಿಂದ ದರ್ಶನ್ ಚಿಕಿತ್ಸೆಗಷ್ಟೇ ಸಿಮಿತವಾಗಿದ್ದುಕೊಂಡು ಹೋದರೆ 45 ದಿನ ಮಧ್ಯಂತರ ಜಾಮೀನು ಅವದಿಯ ಒಳಗೆ ಚಿಕಿತ್ಸೆ ಮುಗಿಸಿಕೊಳ್ಳಬಹುದು ಇಲ್ಲದೇ ಹೊದ್ರೆ ಮತ್ತೆ ಬಳ್ಳಾರಿ ಜೈಲೇ ಗತಿಯಾಗುವುದು ಖಚಿತವಾಗಿದೆ.


Share to all

You May Also Like

More From Author