BBK11: ಬಿಗ್ ಬಾಸ್ ಸ್ಪರ್ಧಿಗೆ ಬಂತು ಸ್ಪೆಷಲ್ ಪತ್ರ: ಬಿಕ್ಕಿ-ಬಿಕ್ಕಿ ಕಣ್ಣೀರಾಕಿದ ಐಶ್ವರ್ಯಾ!

Share to all

ಪ್ರತಿ ಸೀಸನ್ ನಂತೆಯೇ ಈ ಸೀಸನ್ ನಲ್ಲೂ ಸ್ಪರ್ಧಿಗಳಿಗೆ ಮನೆಯಿಂದ ಭಾವನಾತ್ಮಕ ಪತ್ರ ಬಂದಿದೆ. ಆದರೆ ಫ್ಯಾಮಿಲಿಯೇ ಇಲ್ಲದ ಐಶುಗೆ ವಿಶೇಷ ಪತ್ರ ಬಂದಿದೆ. ಅದುವೇ ಬಿಗ್ ಬಾಸ್ ಕಡೆಯಿಂದ.

ಐಶ್ವರ್ಯ ಸಿಂಧೋಗಿ ಅವರಿಗೆ ಯಾರೂ ಇಲ್ವೇ ..? ಅಪ್ಪ ತೀರಿ ಹೋಗಿದ್ದಾರೆ. ಅಮ್ಮ ಕೂಡ ನಿಧನರಾಗಿದ್ದಾರೆ. ಇಬ್ಬರೂ ಇಲ್ಲದ ಐಶ್ವರ್ಯ ಒಂದು ರೀತಿ ಒಂಟಿ ಆಗಿದ್ದಾರೆ. ಚಿಕ್ಕಮ್ಮ ಇದ್ದಾರೆ ಅಂತ ಸ್ವತಃ ಐಶ್ವರ್ಯ ಈ ಹಿಂದೆ, ಇದೇ ಮನೆಯಲ್ಲಿಯೆ ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚು ಏನೂ ಹೇಳಿಕೊಂಡಿಲ್ಲ ಬಿಡಿ.

ಐಶ್ವರ್ಯ ಸಿಂಧೋಗಿ ಪತ್ರಕ್ಕಾಗಿಯೆ ಹಂಬಲಿಸುತ್ತಿದ್ದಾರೆ. ಎರಡೇ ಎರಡು ಲೈನ್ ಪತ್ರ ಬಂದ್ರೆ ಸಾಕು ಅಂತ ಆಸೆ ಪಡುತ್ತಿದ್ದಾರೆ. ಆದರೆ, ಮನೆಯಲ್ಲಿ ಅಪ್ಪಾನೂ ಇಲ್ಲ. ಅಮ್ಮಾನೂ ಇಲ್ಲ. ಏನ್ ಮಾಡ್ಬೇಕು ಹೇಳಿ..? ಹೀಗೆ ಯಾರಾದ್ರು ಕೇಳಿಕೊಂಡ್ರೋ ಇಲ್ವೋ..?

ಆದರೆ, ಬಿಗ್ ಬಾಸ್ ಈ ಒಂದು ನೋವಿಗೆ ಸ್ಪರ್ಧಿಸೋ ಕೆಲಸ ಮಾಡಿದ್ದಾರೆ. ಐಶ್ವರ್ಯ ಸಿಂಧೋಗಿಗೆ ತಾವೇ ಒಂದು ಪತ್ರ ಬರೆದಿದ್ದಾರೆ. ಅದನ್ನ ಎಲ್ಲರಿಗೂ ಕಳಿಸಿಕೊಟ್ಟ ರೀತಿಯಲ್ಲಿಯೇ ಐಶ್ವರ್ಯಗೂ ಕಳಿಸಿಕೊಟ್ಟಿದ್ದಾರೆ. ಇದನ್ನ ನೋಡಿದ ಐಶು ತುಂಬಾನೆ ಖುಷಿ ಆಗಿದ್ದಾರೆ.

ಐಶ್ವರ್ಯ ಸಿಂಧೋಗಿ ಹೆಸರಿನಲ್ಲಿ ಬಿಗ್ ಬಾಸ್ ಒಂದು ಲೆಟರ್ ಬರೆದಿದ್ದಾರೆ. ಅದರಲ್ಲಿ ಏನಿದೆ ಅನ್ನೋದನ್ನು ಕೂಡ ಸ್ವತಃ ಹೇಳಿರೋದು ಇಲ್ಲಿ ವಿಶೇಷವೇ ಆಗಿದೆ. “ನನ್ನ ಮನೆಗೆ ಬಂದಾಗಿನಿಂದಲೂ ನೀವು ನಮ್ಮವರೇ ಆಗಿದ್ದೀರಿ. ನಮ್ಮ ಮನೆಯ ಸದಸ್ಯರೆ ಆಗಿದ್ದೀರಿ. ಹಾಗಾಗಿಯೇ ನಿಮಗಾಗಿ ಪ್ರೀತಿ ತುಂಬಿದ ನನ್ನ ಪತ್ರ” ಅಂತಲೇ ಬಿಗ್ ಬಾಸ್ ಹೇಳಿದ್ದಾರೆ.

ಆದರೆ, ಈ ಒಂದು ಪತ್ರ ಬಂದ ಸಂದರ್ಭದಲ್ಲಿ ಭವ್ಯ ಗೌಡ ರಿಯಾಕ್ಷನ್ ಅದ್ಯಾಕೋ ಬೇರೆ ರೀತಿನೇ ಇತ್ತು. ಅದನ್ನ ವಿವರಿಸೋದು ತುಂಬಾನೆ ಕಷ್ಟ ಬಿಡಿ. ಆದರೆ, ನೋಟದಲ್ಲಿ ಏನೋ ಒಂದು ವಿಚಿತ್ರ ಭಾವನೆ ಕಾಣಿಸಿತು ಅಂತಲೂ ಹೇಳಬಹುದು ನೋಡಿ.


Share to all

You May Also Like

More From Author