ಬಿಗ್ ಬಾಸ್ ಸೀಸನ್ 11ರ ಕಂಟೆಸ್ಟಂಟ್ ಮಾನಸ ಅವರು ತಮ್ಮ ಪಯಣವನ್ನು ಕೇವಲ 1 ತಿಂಗಳಲ್ಲೇ ಮುಗಿಸಿದ್ದಾರೆ. ಕಪ್ ಗೆಲ್ಲಬೇಕು ಅಂತ ಬಂದಿದ್ದ ಮಾನಸ ಬರಿಗೈಲಿ ವಾಪಸ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 5ನೇ ವಾರದ ಎಲಿಮಿನೇಷನ್ ನಡೆದಿದೆ. ಇಷ್ಟು ದಿನ ಮನೆಮಂದಿಯ ಜತೆ ಮನರಂಜನೆಯ ಭಾಗವಾಗಿದ್ದ ಮಾನಸ ಅವರು ಮನೆಯಿಂದ ಹೊರಬಂದಿದ್ದಾರೆ.
ಈ ವಾರ ಬಿಗ್ ಬಾಸ್‌ನಿಂದ ಮಾನಸ ಔಟ್ ಆಗಿದ್ದಾರೆ. ಕಾಮಿಡಿ ನಟಿಯಾಗಿ ಜನಪ್ರಿಯತೆ ಪಡೆದಿದ್ದ ಮಾನಸ, ತುಕಾಲಿ ಸಂತೋಷ್ ಅವರ ಪತ್ನಿ. ಸಂತೋಷ್ ಕಾಮಿಡಿ ಕಿಲಾಡಿ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದರು. ಆ ನಂತರ ಮಾನಸ ಕೂಡ ಕಾಮಿಡಿ ಕಿಲಾಡಿ ಕಾರ್ಯಕ್ರಮಕ್ಕೆ ಬಂದಿದ್ದರು.
ಮನೆಯಿಂದ ಹೊರಡುವಾಗ ನೇರವಾಗಿ ಉಗ್ರಂ ಮಂಜು ಅವರನ್ನು ನೇರವಾಗಿ ಕಳಪೆ ಕೊಟ್ಟರು. ಮಂಜು ಅವರು ಬಿಗ್ ಬಾಸ್ ಮುಂದಿನ ಆದೇಶದವರೆಗೆ ಜೈಲಿನಲ್ಲಿ ಇರಬೇಕಾಗಿದೆ. ಜಗದೀಶ್, ರಂಜಿತ್. ಯಮುನಾ. ಹಂಸ ಬಳಿಕ ಮಾನಸ ಔಟ್ ಆಗಿದ್ದಾರೆ. ತುಕಾಲಿ ಸಂತೋಷ್ ಇದ್ದ ಸೀಸನ್‌ನಲ್ಲಿ ಕಿಚ್ಚ ಸುದೀಪ್ ಅವರೇ, ತುಕಾಲಿ ಸಂತೋಷ್‌ಗಿಂತ ನೀವೇ ಬಿಗ್‌ಬಾಸ್ ಮನೆಗೆ ಬರಬಹುದಿತ್ತು ಎಂದು ಹೇಳಿದ್ದರು. ಅದರಂತೆ ಸೀಸನ್ 11ರಲ್ಲಿ ಮಾನಸ ಅವರನ್ನು ಸ್ಪರ್ಧಿಯಾಗಿ ಬಿಗ್‌ಬಾಸ್ ಕರೆಸಿದ್ದರು.
ಮಾನಸ ಅವರು ಸಾಕಷ್ಟು ಟ್ರೋಲ್‌ಗಳಿಗೂ ಗುರಿಯಾಗಿದ್ದರು. ಬಿಗ್ ಸ್ಪರ್ಧಿಯಾಗಿ ಮನೆಯೊಳಗೆ ಹೋದರೂ ಆಟದಲ್ಲಿಯೂ ಹೆಚ್ಚು ಕಾಣಿಸಿಕೊಳ್ಳದೇ ಇದ್ದರು.ಹಾಸ್ಯ ಕಲಾವಿದೆ ತುಕಾಲಿ ಮಾನಸಾ ಅವರು ನಾಲ್ಕನೇ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.