ಹೈಕೋರ್ಟ್ ನಿಂದ ಜಾಮೀನು ಸಿಕ್ಕ ಬೆನ್ನಲ್ಲೇ ಸುಪ್ರೀಂ ಮೆಟ್ಟಿಲೇರಲು ದರ್ಶನ್ ನಿರ್ಧಾರ!

Share to all

ಹೈಕೋರ್ಟ್ ನಿಂದ ಜಾಮೀನು ಸಿಕ್ಕ ಬೆನ್ನಲ್ಲೇ ಸುಪ್ರೀಂ ಮೆಟ್ಟಿಲೇರಲು ನಟ ದರ್ಶನ್ ನಿರ್ಧಾರ ಮಾಡಲಾಗಿದೆ. ನಟ ದರ್ಶನ್​ಗೆ ಸಿಕ್ಕಿರೋದು 6 ವಾರಗಳ ರಿಲೀಫ್​. ಅದ್ರಲ್ಲಿ ಒಂದು ವಾರ ಕಳೆದೆ ಹೋಯ್ತು. ಉಳಿದಿರೋದು ಐದೇ ವಾರ. ಈ ನಡುವೆ ವಾರದ ದರ್ಶನ್​ ಮೆಡಿಕಲ್​ ರಿಪೋರ್ಟ್​ ಕೋರ್ಟ್​ ಕೈಸೇರಿದೆ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲುಪಾಲಾಗಿದ್ದ ದರ್ಶನ್​ಗೆ ಅನಾರೋಗ್ಯ ಹಿನ್ನೆಲೆ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಕೆಲ ಷರತ್ತುಗಳನ್ನ ವಿಧಿಸಿ ಬೇಲ್​​ ನೀಡಲಾಗಿತ್ತು. ಷರತ್ತಿನ ಅನ್ವಯ ಇವತ್ತು ದರ್ಶನ್​ ಚಿಕಿತ್ಸಾ ವರದಿ ಕೋರ್ಟ್​ಗೆ ಸಲ್ಲಿಕೆಯಾಗಿದೆ. ದರ್ಶನ್​ ಪರ ವಕೀಲರು ಬಿಜಿಎಸ್​ ವೈದ್ಯರು ನೀಡಿರೋ ವರದಿಯನ್ನ ಕೋರ್ಟ್​ ಸಲ್ಲಿಸಿದ್ದಾರೆ. ಆದ್ರೆ, ಸರ್ಕಾರದ ಪರ ವಕೀಲರಿಗೆ ವರದಿ ಪ್ರತಿ ನೀಡಿಲ್ಲ.

ಸದ್ಯಕ್ಕೆ ದರ್ಶನ್ ಆಪರೇಷನ್​ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ದರ್ಶನ್​ರ ಎಲ್5 ಎಸ್1ಗೆ ಫಿಸಿಯೋ ಥೆರಫಿ ನೀಡಲಾಗ್ತಿದೆ. ಆಡ್ಮಿಟ್ ಮಾಡಿಕೊಂಡು, ಸಂಪ್ರಾದಾಯಿಕ ಚಿಕಿತ್ಸೆಯನ್ನ ನೀಡಲಾಗ್ತಿದೆ. ಸದ್ಯ ಫಿಸಿಯೋ ಥೆರಫಿ ಮಾಡಲಾಗ್ತಿದೆ, ಆದ್ರೆ, ಈ ಚಿಕಿತ್ಸೆಯೇ ದರ್ಶನ್​ಗೆ ಅಂತಿಮ ಅಲ್ಲ. ಸರ್ಜರಿಯ ವಿಧಾನದ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗಿದೆ. ಅವರು ಒಪ್ಪಿದ ಬಳಿಕ ಚಿಕಿತ್ಸೆಯ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಆತ ಒಪ್ಪಿದ ಬಳಿಕ ಚಿಕಿತ್ಸೆ ಪ್ಲಾನ್ ಆಫ್ ಆ್ಯಕ್ಷನ್ ಮಾಡಲಾಗುತ್ತೆ.

ಇನ್ನೂ, ಮಧ್ಯಂತರ ರಿಲೀಫ್​ ನೀಡಿರೋ ಹೈಕೋರ್ಟ್​ ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್​ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ರಾಜ್ಯ ಗೃಹ ಇಲಾಖೆ ಒಪ್ಪಿಗೆ ಪಡೆದುಕೊಂಡು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ಚಿಂತನೆ ನಡೆಸ್ತಿದ್ದಾರೆ. ಶಸ್ತ್ರ ಚಿಕಿತ್ಸೆ ನೆಪದಿಂದ ದರ್ಶನ್​ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದ್ರೆ, ಸದ್ಯಕ್ಕೆ ಆರೋಪಿ ದರ್ಶನ್​ಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇಲ್ಲ ಎಂದಾದರೆ ಇದನ್ನೇ ಅಧಾರವಾಗಿಟ್ಟುಕೊಂಡು ಸುಪ್ರೀಂಕೋರ್ಟ್​ ಮೆಟ್ಟಿಲೇರಲು ಪೊಲೀಸರು ಸಿದ್ಧತೆ ನಡೆಸ್ತಿದ್ದಾರೆ.

 

 


Share to all

You May Also Like

More From Author