ನೀವು ಕ್ಯಾಪ್ಟನ್ ಆಗಲು ಅರ್ಹರೇ ಅಲ್ಲ ಎಂದು ಧನರಾಜ್ ವಿರುದ್ಧ ಮೋಕ್ಷಿತಾ ತಿರುಗಿಬಿದ್ದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮೋಕ್ಷಿತಾ ಪೈ ಅವರು ಆರಂಭದಲ್ಲಿ ಸೈಲೆಂಟ್ ಆಗಿ ಇದ್ದರು. ಆ ಬಳಿಕ ಅವರು ರೆಬೆಲ್ ಆದರು. ಈಗ ಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ವಿರುದ್ಧ ಸಿಡಿದೆದ್ದಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ನಿಂದ ಕೆಲವರನ್ನು ಹೊರಕ್ಕೆ ಇಡಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಮೋಕ್ಷಿತಾ ಹೆಸರನ್ನು ಧನರಾಜ್ ಅವರು ತೆಗೆದುಕೊಂಡರು. ಇದರಿಂದ ಮೋಕ್ಷಿತಾ ಸಿಟ್ಟಾದರು. ಅಷ್ಟೇ ಅಲ್ಲ ಧನರಾಜ್ ವಿರುದ್ಧ ಏನೆಲ್ಲ ಕೋಪ ಇತ್ತೋ ಅದನ್ನು ತೀರಿಸಿಕೊಂಡರು. ‘ನೀವು ಕ್ಯಾಪ್ಟನ್ ಆಗಲು ಅರ್ಹರೇ ಅಲ್ಲ’ ಎಂದು ಮೋಕ್ಷಿತಾ ಹೇಳಿದರು.
ಧನರಾಜ್ ಅವರು ಸೈಲೆಂಟ್ ಆಗಿ ಇರುತ್ತಾರೆ, ಕೆಲವೇ ಕೆಲವರನ್ನು ನಾಮಿನೇಟ್ ಮಾಡುತ್ತಾರೆ ಎಂಬಿತ್ಯಾದಿ ವಿಚಾರಗಳನ್ನು ತೆಗೆದುಕೊಂಡರು ಮೋಕ್ಷಿತಾ. ಅಷ್ಟೇ ಅಲ್ಲ ಅವರ ಮಾತಲ್ಲಿ ಯಾವುದೇ ತೂಕ ಇರಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದರು. ಈ ಮೊದಲು ನಡೆದ ಘಟನೆಯನ್ನು ಹಿಡಿದು ಮೋಕ್ಷಿತಾ ಅವರು ಧನರಾಜ್ಗೆ ಕ್ಲಾಸ್ ತೆಗೆದುಕೊಂಡರು.
ಧನರಾಜ್ ಅವರು ಈ ಮೊದಲು ಗೌತಮಿ ಹಿಂಭಾಗಕ್ಕೆ ದಿಂಬಿನಿಂದ ಹೊಡೆದಿದ್ದರು. ಇದಕ್ಕೆ ಗೌತಮಿ ಸಿಟ್ಟಾಗಿದ್ದರು. ಈ ವಿಚಾರವನ್ನು ಮೋಕ್ಷಿತಾ ಎತ್ತಿದ್ದಾರೆ. ‘ಒಂದು ಹೆಣ್ಣು ಮಲಗಿರುವಾಗ ದಿಂಬು ತೆಗೆದುಕೊಂಡು ಅಲ್ಲಿಗೆ ಹೊಡತೀರಲ್ಲ, ನಾಚಿಕೆ ಆಗಲ್ವ. ನಿಮ್ಮಂಥವರು ಹೇಗೆ ಕ್ಯಾಪ್ಟನ್ ಆಗ್ತೀರಿ’ ಎಂದು ಮೋಕ್ಷಿತಾ ಸಿಟ್ಟಲ್ಲೇ ಕೇಳಿದರು