ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11 ಆರನೇ ವಾರಾಂತ್ಯ ಸಮೀಪಿಸಿದೆ. ಎಲಿಮಿನೇಶನ್ಗೂ ಮುನ್ನ ಮನೆಯಲ್ಲಿ ಕ್ಯಾಪ್ಟನ್ಸಿ ಗಾಗಿ ಕಾದಾಟ ಶುರುವಾಗಿದೆ. ಈ ವಾರದ ಟಾಸ್ಕ್ಗಳು ಹೇಗಿದ್ದವು ಎಂದರೆ, ನಾಮಿನೇಶನ್ನಿಂದ ಪಾರಾಗುವ ಅವಕಾಶಗಳೂ ಇದ್ದವು. ಇದೀಗ ಕ್ಯಾಪ್ಟನ್ ಆಗಲು ಯಾರು ಸೂಕ್ತರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವನ್ನು ಮನೆಮಂದಿಗೆ ನೀಡಲಾಗಿದೆ.
ಹೀಗಾಗಿ ಕಿತ್ತಾಟ ಸಹಜವಾಗಿಯೇ ಇತ್ತು. ಅದರಂತೆ ಈ ವಾರ ನಾಮಿನೇಟ್ ದಿನ ಸಮೀಪಿಸುತ್ತಿದ್ದು, ಸ್ಟ್ರಾಂಗ್ ಕಂಟಸ್ಟಂಟ್ ಗಳೇ ನಾಮಿನೇಟ್ ಆಗಿದ್ದು, ಯಾರು ಹೊರ ಹೋಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
ಬಿಗ್ ಬಾಸ್ ನಲ್ಲಿ ಧರ್ಮ ಕೀರ್ತಿರಾಜ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಸೇರಿ ಒಟ್ಟು 7 ಜನ ನಾಮಿನೇಟ್ ಆಗಿದ್ದಾರೆ. ಈ ಏಳರಲ್ಲಿ ಒಬ್ಬರ ಬಿಗ್ ಬಾಸ್ ಪ್ರಯಾಣ ಈ ವಾರಕ್ಕೆ ಮುಗಿಯಲಿದೆ
ಮನರಂಜನೆ ವಿಚಾರದಲ್ಲಿಯೂ ಭವ್ಯ ಗೌಡ ಮುಂದಿದ್ದಾರೆ. ಹೀಗಾಗಿ ಭವ್ಯ ಈ ವಾರ ಮನೆಯಿಂದ ಆಚೆ ಬರೋದು ಡೌಟ್.
ಚೈತ್ರಾ ಕುಂದಾಪುರ ಮಾತಿನ ಮೂಲಕವೇ ಆಟ ಆಡುತ್ತಿದ್ದ ಹೊರಡೆ ಜನರ ಪರ ವಿರೋಧವನ್ನು ಎದರಿಸುತ್ತಿದ್ದಾರೆ.
ಧನರಾಜ್ ಆಟದ ಜೊತೆಗೆ ಕಾಮಿಡಿ ಮಾಡುತ್ತ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಧನರಾಜ್ ಮತ್ತು ಹನುಂತನ ಸ್ನೇಹ ಜನರ ಹೃದಯ ಗೆಲ್ಲುತ್ತಿದೆ. ಆದರೆ ಎಮೋಷನಲಿ ಧನರಾಜ್ ಕುಗ್ಗುತ್ತಿದ್ದು ಎಲ್ಲೋ ಒಂದೆಡೆ ಇದರಿಂದಲೇ ಹಿನ್ನಡೆ ಅನುಭವಿಸಬಹುದಾಗಿದೆ.
ಧರ್ಮ ಕೀರ್ತಿರಾಜ್ ಸೈಲೆಂಟ್ ಆಗಿಯೇ ತಮ್ಮ ಆಟ ಆಡುತ್ತಿದ್ದಾರೆ. ಎಲ್ಲಿ ಬೇಕೋ ಎಷ್ಟು ಬೇಕೋ ಅಷ್ಟನ್ನೇ ಮಾತನಾಡಿದ್ದು, ಧರ್ಮನ ತಾಳ್ಮೆ ಜನರ ಮನಸ್ಸಿಗೆ ಹತ್ತಿರವಾಗುತ್ತಿದೆ. ಇದರಿಂದಾಗಿ ಧರ್ಮ ಸೇಫ್ ಆದರೂ ಆಗಬಹುದು.
ಮೋಕ್ಷಿತಾ ಕಾರಿನಲ್ಲಿ ಹೋಗಿ ಬಂದಿದ್ದೇ ಅವರ ಆಟದ ವೈಖರಿ ಕಂಪ್ಲೀಟ್ ಚೇಂಜ್ ಆಗಿದೆ. ಮನೆಯಲ್ಲಿ ಯಾರೇ ತಮ್ಮ ವಿರುದ್ಧ ಬಂದರೂ ತೊಡೆ ತಟ್ಟಿ ಜಗಳಕ್ಕೆ ನಿಲ್ಲುತ್ತಿದ್ದಾರೆ. ಮೋಕ್ಷಿತಾ ಉಗ್ರಂ ಮಂಜು ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ.
ಗೋಲ್ಡ್ ಸುರೇಶ್ ಆಟ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅಲ್ಲದೇ ಅವರ ಕಾಲಿಗೆ ಈ ವಾರ ಪೆಟ್ಟಾಗಿದ್ದು, ಮತ್ತೊಂದು ಹಿನ್ನಡೆಯಾಗಿದೆ.
ತ್ರಿವಿಕ್ರಮ್ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದು, ಎಲ್ಲದರಲ್ಲೂ ಜನರ ಮೆಚ್ಚುಗೆ ಪಡೆಯುತ್ತಿದ್ದಾರೆ. ತಮ್ಮ ಆಟದ ವೈಖರಿ ಮತ್ತು ಟಾಸ್ಕ್ ನಲ್ಲಿ ಆಡುವ ರೀತಿ ಜನರಿಗೆ ಇಷ್ಟವಾಗುತ್ತಿದೆ.
ಎಲ್ಲ ಲೆಕ್ಕಾಚಾರಗಳನ್ನು ನೋಡೋದಾದರೆ ಮೋಕ್ಷಿತಾ ಮತ್ತು ಗೋಲ್ಡ್ ಸುರೇಶ್ ಈ ವಾರ ಕಡಿಮೆ ಮತ ಪಡೆಯಬಹುದಾಗಿದೆ.