BBK: ಈ ವಾರದ ಕಿಚ್ಚನ ಚಪ್ಪಾಳೆ ಭವ್ಯಾಗೆ!? ಫ್ಯಾನ್ಸ್ ಆಸೆ ಈಡೇರಿಸುತ್ತಾರಾ ಕಿಚ್ಚ! ?

Share to all

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ 40ನೇ ದಿನಕ್ಕೆ ಕಾಲಿಟ್ಟಿದೆ. ಒಟ್ಟು 17 ಸ್ಪರ್ಧಿಗಳು ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಟ್ಟಿದ್ದರು. 17 ಸ್ಪರ್ಧಿಗಳಲ್ಲಿ ಸದ್ಯ 13 ಜನ ಬಿಗ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಕಲರ್ಸ್​ ಕನ್ನಡದಲ್ಲಿ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​ ವೇದಿಕೆಗೆ ಬಂದಿದ್ದಾರೆ. ವಿಶೇಷ ಅಧಿಕಾರಗಳನ್ನು ಗೆಲ್ಲೋ ಉದ್ದೇಶವನ್ನು ಇಟ್ಟುಕೊಂಡಿತ್ತು ಇಡೀ ಮನೆ. ಈ​ ಯುದ್ಧದಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ತನ್ನ ತನವನ್ನು ಕಳೆದುಕೊಂಡವರು ಯಾರು ಅಂತ ಇಂದಿನ ಸಂಚಿಕೆಯಲ್ಲಿ ಚರ್ಚೆಯಾಗಲಿದೆ. ಸದ್ಯ ಇದೇ ಪ್ರೋಮೋ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ

ಇನ್ನೂ ಕಳೆದ ವಾರ ಕಿಚ್ಚನ ಚಪ್ಪಾಳೆಯನ್ನು ಗಾಯಕ ಹನುಮಂತ ಅವರು ಗಿಟ್ಟಿಸಿಕೊಂಡಿದ್ದರು. ಹೀಗಾಗಿ ಈ ವಾರ ಯಾವ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಬರುತ್ತೆ ಅಂತ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ಸೀಸನ್​ 10ರಿಂದ ಬಿಗ್​ಬಾಸ್ ಮನೆಯಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ಅವರು ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಚಪ್ಪಾಳೆ ಹೊಡೆಯುತ್ತಿದ್ದರು

ಆದರೆ ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಈ ಸ್ಪರ್ಧಿಗೆ ಈ ವಾರ ಕಿಚ್ಚನ ಚಪ್ಪಾಳೆ ಹೊಗಬೇಕು ಅಂತ ಅಭಿಯಾನ ಮಾಡಿದ್ದಾರೆ. ಹೌದು, ಈ ವಾರ ನಟಿ ಭವ್ಯಾ ಗೌಡ ಚೆನ್ನಾಗಿ ಟಾಸ್ಕ್​ ಆಡಿದ್ದಾರೆ. ಎಲ್ಲ ಕಡೆಯಲ್ಲೂ ಕಾಣಿಸಿಕೊಂಡಿದ್ದಾರೆ. ವೀಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಅದಕ್ಕಾಗಿ ಈ ವಾರದ ಕಿಚ್ಚನ ಚಪ್ಪಾಳೆ ಭವ್ಯಾ ಅವರಿಗೆ ಹೋಗಬೇಕು ಅಂತ ಫ್ಯಾನ್ಸ್​ ಬೇಡಿಕೆ ಇಟ್ಟಿದ್ದಾರೆ. ಈ ಹೊಸ ಅಧ್ಯಾಯದೊಂದಿಗೆ ಬಿಗ್​ಬಾಸ್ ಮನೆಗೆ ಬಂದಿದ್ದ 13 ಸ್ಪರ್ಧಿಗಳಲ್ಲಿ ಎರಡನೇ ಬಾರಿ ‘ಕಿಚ್ಚನ ಚಪ್ಪಾಳೆ’ ಯಾರಿಗೆ ಸಿಗಲಿದೆ ಅಂತ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.


Share to all

You May Also Like

More From Author