ಬೆಂಗಳೂರು: ನಟ ಅಭಿಷೇಕ್ ಅಂಬರೀಶ್ ಮನೆಯಲ್ಲಿ ಇಂದು ಸಡಗರ ಮನೆ ಮಾಡಿದೆ. ಮಂಡ್ಯದ ಗಂಡು ಅಂಬರೀಶ್ ಮತ್ತೆ ಹುಟ್ಟಿ ಬಂದಿದ್ದಾರೆ. ಅಭಿಷೇಕ್ ಪತ್ನಿ ಅವಿವಾ ಇಂದು 8.30ರ ಸುಮಾರಿಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು. ತಾಯಿ ಮಗು ಇಬ್ಬರೂ ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯವನ್ನು ಮಾಡಿಸಿಕೊಂಡಿದ್ದ ಆವಿವಾ ಅಭಿಷೇಕ್ ಸದ್ಯದಲ್ಲಿಯೇ ಹೊಸ ಅತಿಥಿ ಬರಲಿದ್ದಾನೆ ಎಂಬ ಸಿಹಿ ಸುದ್ದಿಯನ್ನು ನೀಡಿದ್ದರು. ಇಂದು ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದು. ಕನ್ನಡದ ಧೀಮಂತ ನಟ, ಮಂಡ್ಯದ ಗಂಡು ಅಂಬರೀಶ್ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.