BBK11: ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ-ಕಲ್ಲೋಲ: ಚೈತ್ರಾ ಕುಂದಾಪುರ ಮೇಲೆ ಶಿಶಿರ್ ಕೆಂಡಾಮಂಡಲರಾಗಿದ್ಯಾಕೆ!?

Share to all

ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದೆ. ಅದರಲ್ಲೂ ಈ ವಾರ ಬಿಗ್ ಬಾಸ್ ಸ್ಪರ್ಧಿಗಳನ್ನು ಜೋಡಿ ಮಾಡಿ ಆಟಕ್ಕೆ ಬಿಟ್ಟ ಬಿಗ್ ಬಾಸ್ ಸಖತ್ ಟ್ವಿಸ್ಟ್ ಕೊಟ್ಟಿದೆ.

ಸ್ಪರ್ಧಿಗಳಿಗೆ ಜೋಡಿ ಬದಲಿಸಿಕೊಳ್ಳುವ ಚಾನ್ಸ್ ಕೊಟ್ಟಿದೆ. ನಿಮ್ಮ ಜೋಡಿ ಸದಸ್ಯತ್ವ ಮುರಿಯುವ ಬಗ್ಗೆ ಸ್ಪರ್ಧಿಗಳಿಗೆ ಕೇಳಿದ್ರು. ಈ ವೇಳೆ ಚೈತ್ರಾ ಕುಂದಾಪುರ ಜೋಡಿ ಮುರಿಯಲು ಒಪ್ಪಿಕೊಂಡಿದ್ದಾರೆ. ನೀವು ಶಿಶಿರ್ ಗೆ ಬದಲಾಗಿ ತ್ರಿವಿಕ್ರಮ್ ಗೆ ಜೋಡಿ ಆಗ್ತೀರಾ ಎಂದು ಬಿಗ್ ಬಾಸ್ ಕೇಳಿದ್ದಕ್ಕೆ ಚೈತ್ರಾ ಒಪ್ಪಿಕೊಂಡ್ರು

ಚೈತ್ರಾ ನಿರ್ಧಾರ ಕೇಳಿ ಶಿಶಿರ್ ಶಾಕ್ ಆಗಿದ್ದಾರೆ. ಚೈತ್ರಾ ಕುಂದಾಪುರ ಮೇಲೆ ಕೆಂಡಾಮಂಡಲರಾಗಿದ್ದಾರೆ. ಕೂಗಾಡಿ ರಂಪಾಟ ಮಾಡಿದ್ರು. ನೀವು ಮಾಡಿದ್ದು ಎಷ್ಟು ಸರಿ ಎಂದು ಚೈತ್ರಾಳನ್ನು ಪ್ರಶ್ನೆ ಮಾಡಿದ್ರು. ಜೋಡಿ ಬದಲಾವಣೆ ಚೈತ್ರಾ ಕೊಟ್ಟ ಕಾರಣ ಶಿಶಿರ್ ಕೋಪವನ್ನು ನೆತ್ತಿಗೇರಿಸಿದೆ.

ಶಿಶಿರ್ ಗಿಂತ ತ್ರಿವಿಕ್ರಮ್ ದೈಹಿಕ ಹಾಗೂ ಮಾನಸಿಕವಾಗಿ ಸ್ಟ್ರಾಂಗ್ ಆಗಿದ್ದಾರೆ ಎಂದು ನಾನು ಈ ಆಯ್ಕೆ ಒಪ್ಪಿಕೊಂಡೆ ಎಂದು ಚೈತ್ರಾ ಹೇಳಿದ್ದಾರೆ. ಮಾನಸಿಕ ಎಂದ ಮಾತಿಗೆ ಶಿಶಿರ್ ಕೋಪಗೊಂಡು ಚೈತ್ರಾ ಮೇಲೆ ಕೂಗಾಡಿದ್ದಾರೆ.

ನಾನೇನು ಕಡ್ಲೆ ಪುರಿ ತಿನ್ತಿದ್ನಾ ಎಂದು ಶಿಶಿರ್ ಕೂಗಾಡಿದ್ರು. ನಾಮಿನೇಷನ್ ಅಂತ ಬಂದಾಗ ಅಯ್ಯೋ-ಅಮ್ಮ ಎಂದು ನಾಟಕವಾಡ್ತಾರೆ. ಈ ನಿರ್ಧಾರದಿಂದ ಒಬ್ಬರನ್ನು ಇಡೀ ವಾರದ ಟಾಸ್ಕ್ ನಿಂದ ಹೊರಗಿಡ್ತಾರೆ ಅನ್ನೋದು ದೇವರಾಣೆ ನನಗೆ ಗೊತ್ತಿರಲಿಲ್ಲ ಎಂದು ಚೈತ್ರಾ ಆಣೆ ಪ್ರಮಾಣ ಮಾಡಿದ್ದಾರೆ. 12 ವರ್ಷ ಮಣ್ಣು ಹೊತ್ತಿರೋರು ಆ್ಯಕ್ಟರ್​ ಗಳು ನಾವಲ್ಲ, ನೋಡಿ ಇಲ್ಲಿ ಇದ್ದಾರಲ್ಲ ಚೈತ್ರಾ ಇವರೇ ಮಹಾನ್ ನಟಿ ಎಂದು ಶಿಶಿರ್​, ಚೈತ್ರಾ ಕುಂದಾಪುರ ಮೇಲೆ ಕೂಗಾಡಿದ್ದಾರೆ.


Share to all

You May Also Like

More From Author