ಬಿಗ್ ಬಾಸ್ ಮನೆಯಲ್ಲಿರುವ ಎಲ್ಲರಿಗೂ ಈ ವಾರ ಒಬ್ಬರು ಔಟ್ ಆಗುತ್ತಾರೆ ಅನ್ನೋದು ಪಕ್ಕಾ ಗೊತ್ತಿದೆ. ಹೀಗಾಗಿಯೇ ಪ್ರತಿಯೊಂದು ಟಾಸ್ಕ್ನಲ್ಲಿಯೂ ಬಹಳ ಅಗ್ರೆಸ್ಸಿವ್ ಆಗಿ ಆಟ ಆಡುತ್ತಿದ್ದಾರೆ. ಎದುರಾಳಿಗಳು ಓವರ್ ಟೇಕ್ ಮಾಡಲು ಅವಕಾಶ ನೀಡದ ಸ್ಪರ್ಧಿಗಳು ತಮ್ಮ ಪಟ್ಟು ಬಿಟ್ಟಿಲ್ಲ. ಕೊನೆಯದಾಗಿ ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಾರೆ ಅನ್ನೋ ಕುತೂಹಲಕ್ಕೆ ಕಾರಣವಾಗಿದೆ.
6 ಜೋಡಿಯ ಆಟದಲ್ಲಿ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಂದ್ರೆ ಇಬ್ಬರಲ್ಲಿ ಯಾರು ನಾಮಿನೇಟ್ ಆಗುತ್ತೀರಿ ಅನ್ನೋ ಒಮ್ಮತದ ಅಭಿಪ್ರಾಯದಲ್ಲಿ ಸೋತವರು ಡೈರೆಕ್ಟ್ ನಾಮಿನೇಟ್ ಆಗಿದ್ದಾರೆ. ನಿನ್ನೆ ನಡೆದ ಎಪಿಸೋಡ್ನಲ್ಲಿ ಐಶ್ವರ್ಯಾ ಅವರಿಗೆ ಧರ್ಮ ಕೀರ್ತಿ ರಾಜ್ ಹಾಗೂ ಚೈತ್ರಾ ಕುಂದಾಪುರ ಅವರಿಗಾಗಿ ಶಿಶಿರ್ ಅವರು ತ್ಯಾಗ ಮಾಡಿದ್ದಾರೆ. 12 ಮಂದಿಯಲ್ಲಿ ಕೊನೆಗೆ ಐಶ್ವರ್ಯಾ ಮತ್ತು ಚೈತ್ರಾ ಕುಂದಾಪುರ ಅವರು ಮಾತ್ರ ಈ ವಾರ ಸೇಫ್ ಆಗಿದ್ದಾರೆ.
ಧನರಾಜ್, ಮೋಕ್ಷಿತಾ ಅವರ ಮಧ್ಯೆ ಯಾರು ತ್ಯಾಗ ಮಾಡಲು ರೆಡಿ ಇರಲಿಲ್ಲ. ಭವ್ಯ ಹಾಗೂ ಮಂಜು ಅವರಲ್ಲೂ ಒಮ್ಮತದ ಅಭಿಪ್ರಾಯ ಮೂಡಲಿಲ್ಲ. ಹನುಮಂತು ಹಾಗೂ ಗೌತಮಿ ಅವರಲ್ಲಿ ಇಬ್ಬರು ಎಲಿಮಿನೇಟ್ ಆಗಲು ತಯಾರಿದ್ರು ಯಾರು ಅನ್ನೋ ಗೊಂದಲದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಗೋಲ್ಡ್ ಸುರೇಶ್ ಹಾಗೂ ಅನುಷಾ ಅವರು ಕೂಡ ಇದೇ ರೀತಿಯಲ್ಲಿ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಈ ವಾರದ ಎಲಿಮಿನೇಷನ್ ರೋಚಕವಾಗಿ ಇರಲಿದೆ. ಧರ್ಮ ಕೀರ್ತಿರಾಜ್, ಧನರಾಜ್, ಮೋಕ್ಷಿತಾ, ಶಿಶಿರ್, ಮಂಜು, ಭವ್ಯಾ, ಗೌತಮಿ, ಹನುಮಂತ, ಗೋಲ್ಡ್ ಸುರೇಶ ಹಾಗೂ ಅನುಷಾ ಅವರು ನಾಮಿನೇಟ್ ಆಗಿದ್ದಾರೆ. ಈ 10 ಮಂದಿಯಲ್ಲಿ ಒಬ್ಬರೂ ಈ ವಾರ ಔಟ್ ಆಗಲಿದ್ದು, ವೀಕ್ಷಕರ ವೋಟಿಂಗ್ ಬಹಳ ಮುಖ್ಯವಾಗಿದೆ