ರಾಜಧಾನಿ ಬೆಂಗಳೂರಿನ ಚಂದ್ರಾ ಲೇಔಟನ್ ನಲ್ಲಿ ಸಿನಿಮಾ ನಿರ್ದೇಶಕನಿಗೆ ನಟನೊಬ್ಬ ಕೊಲೆ ಬೆದರಿಕೆ ಹಾಕಿರುವ ಘಟನೆ ಜರುಗಿದೆ. ಜೋಡಿಹಕ್ಕಿ , ಭೂಮಿಗೆ ಬಂದ ಭಗವಂತ. ಧಾರವಾಹಿಯಲ್ಲಿ ನಟಿಸಿದ್ದ ನಟನಿಂದ ಈ ಘಟನೆ ಜರುಗಿದೆ.
ಸಿನಿಮಾ ಅರ್ಧಕ್ಕೆ ನಿಂತ ಹಿನ್ನೆಲೆ ಕೋಪಗೊಂಡು ನಿರ್ದೇಶಕನಿಗೆ ಈ ಬೆದರಿಕೆ ಹಾಕಲಾಗಿದೆ. ನಟ ತಾಂಡವ ರಾಮ್ ನಿಂದ ಕೃತ್ಯ ನಡೆದಿದ್ದು, ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಮೇಲೆ ಆರೋಪಿ ಗುಂಡು ಹಾರಿಸಿದ್ದಾನೆ. ಈ ಘಟನೆ ನಗರದ ಚಂದ್ರಾ ಲೇಔಟನ್ ನಲ್ಲಿ ನಡೆದಿದೆ. ಲೈಲೆನ್ಸ್ ಗನ್ ತೋರಿಸಿ ಬೆದರಿಕೆ ಹಾಕಿದ್ದು, ಬಳಿಕ ಒಂದು ಸುತ್ತು ಗುಂಡಿ ಹಾರಿಸಿದ್ದಾನೆ.
ಸಿನಿಮಾ ಅರ್ಧಕ್ಕೆ ನಿಲ್ಲಿದ ಕಾರಣಕ್ಕೆ ಗಲಾಟೆ ಮಾಡಿಕೊಂಡು ಕೊಲೆ ಯತ್ನ ಮಾಡಲಾಗಿದೆ. ಚಂದ್ರ ಲೇಔಟ್ ಪೊಲೀಸರಿಂದ ಆರೋಪಿ ತಾಂಡವ ರಾಮ್ ಅರೆಸ್ಟ್ ಮಾಡಲಾಗಿದೆ. ತಾಂಡವ ರಾಮ್ ಜೋಡಿಹಕ್ಕಿ , ಭೂಮಿಗೆ ಬಂದ ಭಗವಂತ. ಧಾರವಾಹಿಯಲ್ಲಿ ನಟನೆ ಮಾಡಿದ್ದ ಎನ್ನಲಾಗಿದೆ.