ಬಿಗ್ ಮನೆಗೆ ಬಂದ ಮೊದಲ ವಾರದಲ್ಲೇ ಜೈಲಿಗೆ ಹೋದ ರಜತ್! ಹೋಗೋ ಮೊದಲು ಗೋಲ್ಡ್ ಸುರೇಶ್ ಗೆ ಬುಜ್ಜಿ ಚಾಲೆಂಜ್!

Share to all

ಬಿಗ್ ಮನೆಗೆ ಬಂದ ಮೊದಲ ವಾರದಲ್ಲೇ ರಜತ್ ಅವರು ಜೈಲು ಸೇರಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಕಳಪೆ ಮತ್ತು ಉತ್ತಮ ನೀಡುವ ವಿಚಾರದಲ್ಲಿ ಹೊತ್ತಿ ಉರಿದಿದೆ. ಬಹುತೇಕ ಸ್ಪರ್ಧಿಗಳು ಕಳಪೆಗೆ ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದು, ಜೈಲು ಸೇರಿದ್ದಾರೆ.

ಕಳಪೆ ನೀಡುವ ವೇಳೆ ರಜತ್ ಬಳಸಿದ ಪದಗಳ ಬಗ್ಗೆ ಗೋಲ್ಡ್ ಸುರೇಶ್ ಪ್ರಶ್ನೆ ಮಾಡಿದ್ದಾರೆ. ವೇದಿಕೆಗೆ ಬರುವ ರಜತ್, ಮತ್ತೆ ಗೋಲ್ಡ್ ಸುರೇಶ್ ಅವರತ್ತ ಬೆರಳು ತೋರಿಸಿ.. ಇಂತವರನ್ನೆಲ್ಲ ಮನೆಗೆ ಕಳುಹಿಸಿಯೇ ನಾನು ಹೋಗೋದು ಎಂದು ಚಾಲೇಂಜ್ ಮಾಡಿದ್ದಾರೆ. ನಾನು ಹುಟ್ಟಿದಾಗಿಂದ ಹೀಗೇ ಇದ್ದೀನಿ, ಇವಾಗಲೂ ಹೀಗೆ ಇದ್ದೀನಿ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತಾಡ್ತೀನಿ. ತೋರಿಸ್ತೀನಿ. ಇನ್ಮುಂದೆ ನಿಜವಾದ ಆಟ ಶುರು ಎಂದು ಚಿಟಿಕೆ ಹೊಡೆದಿದ್ದಾರೆ.

ಇನ್ನೂ ಬಿಗ್ ಬಾಸ್’ ಕನ್ನಡ ಸೀಸನ್ 11ರ ಶೋಗೆ ಅದ್ಯಾಕೋ ಅವಾಚ್ಯ ಶಬ್ದಗಳ ನಂಟು ಜೋರಾಗಿಯೇ ಇರುವಂತಿದೆ. ಆರಂಭದಲ್ಲಿ ಎಲ್ಲರ ಗಮನಸೆಳೆದಿದ್ದ ‘ವಕೀಲ್ ಸಾಬ್’ ಜಗದೀಶ್ ಅವರು ಮನೆಯಲ್ಲಿರುವ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡಿದ್ದರು. ಆನಂತರ ಅವರು ಶೋನಿಂದಲೇ ಎಲಿಮಿನೇಟ್ ಆಗಬೇಕಾಯಿತು. ಇದೀಗ ಮತ್ತೊಮ್ಮೆ ಆ ರೀತಿಯ ವರ್ತನೆಯನ್ನು ರಜತ್ ಕಿಶನ್ ತೋರಿದ್ದಾರೆ.


Share to all

You May Also Like

More From Author