ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಂದವರು ಮೊದಲ ವಾರವೇ ಫುಲ್ ಜೋಷ್ ಆಗಿ ಆಡಿದ್ರು. ಇಬ್ಬರ ಮಾತು, ಗತ್ತು ನೋಡಿದ ಪ್ರೇಕ್ಷಕರು ಇವರಿಬ್ಬರು ಆರಂಭದಲ್ಲೇ ಬರ್ಬೇಕಿತ್ತು ಅಂತಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರು ಶಿಶಿರ್ ಹಾಗೂ ರಜತ್ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮನೆಯ ಆಟಗಾರರ ಪೈಕಿ ಶಿಶಿರ್ ಒಬ್ಬ ಸಮರ್ಥ ಆಟಗಾರ ಎಂದು ಆರಂಭದ ಕೆಲ ವಾರಗಳಲ್ಲಿ ಹೆಸರು ಮಾಡಿದ್ದರು. ಆದರೆ ಇತ್ತೀಚೆಗೆ ಅವರ ಆಟದ ವೈಖರಿ ಬದಲಾಗಿದೆ. ಇದನ್ನು ಗಮನಿಸಿದ ಸುದೀಪ್ ತುಸು ಖಾರವಾಗಿಯೇ ಶಿಶಿರ್ಗೆ ಎಚ್ಚರಿಕೆ ನೀಡಿದರು.
ಶಿಶಿರ್ ಕಳೆದ ವಾರ ಸುದೀಪ್ರ ‘ಕೆಂಪೇಗೌಡ’ ಸಿನಿಮಾ ಮಾದರಿಯಂತೆ ಮೀಸೆ ಬಿಟ್ಟಿದ್ದಾರೆ. ಇದನ್ನು ನೋಡಿದ ಸುದೀಪ್, ‘ಕೆಂಪೇಗೌಡ’ ಸಿನಿಮಾದಲ್ಲಿ ನಿಮಗೆ ಇಷ್ಟವಾಗಿದ್ದು ಏನು? ಎಂದು ಪ್ರಶ್ನಿಸಿದರು. ಅದಕ್ಕೆ ಶಿಶಿರ್, ಕೆಂಪೇಗೌಡನ ಗತ್ತು ಇಷ್ಟವಾಯ್ತು ಎಂದರು. ಆ ಸಿನಿಮಾದಲ್ಲಿ ಆಕ್ಷನ್ ಎಷ್ಟಿತ್ತು, ರೊಮ್ಯಾನ್ಸ್ ಎಷ್ಟಿತ್ತು ರೊಮ್ಯಾನ್ಸ್ ಎಷ್ಟಿತ್ತು? ಎಂದರು. 80% ಆಕ್ಷನ್ ಇತ್ತು, 20% ರೊಮ್ಯಾನ್ಸ್ ಇತ್ತು ಎಂದರು. ಒಂದು ವೇಳೆ ‘ಕೆಂಪೇಗೌಡ’ ಸಿನಿಮಾದಲ್ಲಿ 80% ರೊಮ್ಯಾನ್ಸ್, 20% ಆಕ್ಷನ್ ಇದ್ದರೆ ನಿಮಗೆ ಇಷ್ಟವಾಗುತ್ತಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಇಲ್ಲ ಎಂದರು ಶಿಶಿರ್. ನಿಮ್ಮ ಕತೆಯೂ ಈಗ ಅದೇ ರೀತಿ ಆಗಿದೆ. ನಿಮ್ಮ ರೊಮ್ಯಾನ್ಸ್ ಹೆಚ್ಚಾಗಿದೆ ಆಕ್ಷನ್ ಕಡಿಮೆ ಆಗಿದೆ’ ಎಂದರು ಸುದೀಪ್
ನೀವು, ಐಶ್ವರ್ಯಾ ಗೇಮ್ ಅನ್ನು ಮರೆತೇ ಬಿಟ್ಟಿದ್ದೀರಿ. ನೀವು ಅದೆಷ್ಟು ನಿಮ್ಮಲ್ಲೆ ಕಳೆದುಹೋಗಿದ್ದೀರಿ ಎಂದರೆ ಚೈತ್ರಾ ಅವರು ನಿಮ್ಮ ಕಣ್ಣೆದುರೇ ನಿಮ್ಮ ಹಣ ತೆಗೆದುಕೊಂಡು ಹೋದರು ಆದರೆ ನಿಮಗೆ ಅದು ಗೊತ್ತಾಗಿಲ್ಲ. ಎಲ್ಲರಿಗೂ ಒಂದು ಕಂಫರ್ಟ್ ಜೋನ್ ಬೇಕು, ಒಬ್ಬೊಬ್ಬರು ಒಬ್ಬರೊಟ್ಟಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ ಆದರೆ ಅದು ಅತಿಯಾಗಬಾರದು. ನಿಮ್ಮ ಬಂಧ, ಆತ್ಮೀಯತೆ ಎಲ್ಲ ಹೊರಗೆ ಇರಲಿ, ಇದು ಹೀಗೇ ಮುಂದುವರೆದರೆ ನಿಮ್ಮಿಬ್ಬರಲ್ಲಿ ಒಬ್ಬರು ಆದಷ್ಟು ಬೇಗ ಹೊರಗೆ ಹೋಗುತ್ತೀರಿ ಎಂದು ಸುದೀಪ್ ಖಾರವಾಗಿ ಹೇಳಿದರು.