ತನ್ನ ವಿಭಿನ್ನ ವ್ಯಕ್ತಿತ್ವದಿಂದಲೇ ಎಲ್ಲರ ಮನೆ ಮಾತಾಗಿದ್ದ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.ಧರ್ಮ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಮನರಂಜನೆ ನೀಡಲಿಲ್ಲ. ಎಲ್ಲ ಸ್ಪರ್ಧಿಗಳ ಜೊತೆಗೂ ಅವರು ಹೆಚ್ಚು ಬೆರೆಯಲಿಲ್ಲ. ಕಳೆದ ವಾರ ಅವರ ಸ್ನೇಹಿತೆ ಅನುಷಾ ರೈ ಎಲಿಮಿನೇಟ್ ಆಗಿದ್ದರು. ಈ ವಾರ ಧರ್ಮ ಔಟ್ ಆಗಿದ್ದಾರೆ.
ಧರ್ಮ ಕೀರ್ತಿರಾಜ್ ಅವರು ತಾವಾಗಿಯೇ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುವವರಲ್ಲ. ಈ ಮೊದಲು ಜಗದೀಶ್ ವಿರುದ್ಧ ಇಡೀ ಮನೆಯೇ ತಿರುಗಿ ಬಿದ್ದಿದ್ದಾಗ ಧರ್ಮ ಅವರು ಅನುಷಾ ಜೊತೆ ಕಿಚನ್ನಲ್ಲಿ ಕೂಲ್ ಆಗಿದ್ದರು. ಅವರು ದೊಡ್ಮನೆಯಲ್ಲಿ ಕೂಗಾಡಿದ್ದು ತುಂಬಾ ಕಡಿಮೆ. ಅವರ ಈ ಒಳ್ಳೆಯತನವೇ ಅವರಿಗೆ ಮುಳುವಾಗಿದೆ ಎಂದರೂ ತಪ್ಪೇನಿಲ್ಲ. ಯಾಕೆಂದರೆ, ಬಿಗ್ ಬಾಸ್ ಮನೆಯಲ್ಲಿ ಕೂಗಾಡುತ್ತಾ ಸದ್ದು ಮಾಡುವವರೇ ಹೈಲೈಟ್ ಆಗುವುದು ಜಾಸ್ತಿ.
2 ವಾರ ಮೊದಲೇ ಬಿಗ್ ಬಾಸ್ ಮನೆಯಿಂದ ತಾವು ಹೊರಗೆ ಹೋಗಬೇಕು ಎಂದು ಧರ್ಮ ಕೀರ್ತಿರಾಜ್ ಅವರು ನಿರ್ಧರಿಸಿದ್ದರು. ಯಾಕೆಂದರೆ, ಈ ಹಿಂದೆ ‘ಬಿಗ್ ಬಾಸ್ ಮನೆಯಲ್ಲಿ ನಾಲಾಯಕ್ ಯಾರು’ ಎಂಬ ಪ್ರಶ್ನೆಗೆ ಅನೇಕರು ಧರ್ಮ ಅವರ ಹೆಸರನ್ನು ಹೇಳಿದ್ದರು. ಆ ಮಾತು ಕೇಳಿಸಿಕೊಂಡಿದ್ದ ಅವರಿಗೆ ಬಹಳ ನೋವಾಗಿತ್ತು. ಹಾಗಾಗಿ ಅವರು ಬಿಗ್ ಬಾಸ್ನಿಂದ ಹೊರಗೆ ಹೋಗುವುದೇ ಸೂಕ್ತ ಎಂದು ತೀರ್ಮಾನಿಸಿದ್ದರು. ಕಡೆಗೂ ಈ ವಾರ ಅವರು ಎಲಿಮಿನೇಟ್ ಆಗಿದ್ದು, ಹಲವರು ಬೇಸರ ತರಿಸಿದೆ.