ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಕಂಟಸ್ಟಂಟ್ ರಜತ್ ಅವರು ವಿಭಿನ್ನ ಶೈಲಿಯಲ್ಲಿಯೇ ಬಿಗ್ ಬಾಸ್ ಮನೆಯಲ್ಲಿ ಆಟ ಆಡುತ್ತಾ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದರ್ಶನ್ ನಟನೆಯ ಸಿನಿಮಾಗಳ ಹಾಡುಗಳು ಬರುವುದಿಲ್ಲ! ಪ್ರತಿ ಸೀಸನ್ ಆರಂಭ ಆಗಾಗಲೂ ಜನರು ಈ ಬಗ್ಗೆ ಮಾತನಾಡುತ್ತಾರೆ. ಬಿಗ್ ಬಾಸ್ ಕಾರ್ಯಕ್ರಮದ ನವೆಂಬರ್ 25ರ ಎಪಿಸೋಡ್ನಲ್ಲಿ ದರ್ಶನ್ ಅವರ ಹಾಡು ಕೇಳಿಸಿದೆ! ಆದರೆ ಅದು ಮುಂಜಾನೆ ಕೇಳಿಬರುವ ಸಾಂಗ್ ಅಲ್ಲ.
ಬಿಗ್ ಬಾಸ್ ಆಟದಲ್ಲಿ ರಾಜಾಡಳಿತದ ಟಾಸ್ಕ್ ನೀಡಲಾಗಿದೆ ಕ್ಯಾಪ್ಟನ್ ಮಂಜು ಅವರು ಮಹಾರಾಜ ಆಗಿದ್ದಾರೆ. ತ್ರಿವಿಕ್ರಮ್ ಮತ್ತು ರಜತ್ ಅವರು ಸೇನಾಧಿಪತಿಗಳಾಗಿದ್ದಾರೆ. ಗೋಲ್ಡ್ ಸುರೇಶ್ ಅವರು ಸಲಹಗಾರನಾಗಿದ್ದಾರೆ. ಇನ್ನುಳಿದವರು ಪ್ರಜೆಗಳಾಗಿದ್ದಾರೆ. ಮಹಾರಾಜ ಮಂಜು ಹೇಳಿದಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ. ಒಂದು ಹಾಡು ಹೇಳಿ ಎಂದು ರಜತ್ಗೆ ಮಂಜು ಆಜ್ಞೆ ಮಾಡಿದರು. ಆಗ ರಜತ್ ಅವರು ‘ಕರಿಯ’ ಸಿನಿಮಾದ ಹಾಡು ಹೇಳಿದರು
ರಜತ್ ಅವರು ‘ಕರಿಯ’ ಚಿತ್ರದ ‘ಕೆಂಚಾಲೋ ಮಂಚಾಲೋ ಹೆಂಗವ್ಳಾ ನಿನ್ ಡವ್ಗಳು..’ ಹಾಡನ್ನು ಹೇಳಿದರು. ಪುನಃ ಅದೇ ಹಾಡನ್ನು ಹೇಳುತ್ತಾ ಡ್ಯಾನ್ಸ್ ಮಾಡುವಂತೆ ಮಂಜು ಆದೇಶಿಸಿದರು. ಎರಡನೇ ಬಾರಿ ರಜತ್ ಅವರು ಡ್ಯಾನ್ಸ್ ಮಾಡುತ್ತಾ ಆ ಸಾಂಗ್ ಹೇಳಿದರು. ರಜತ್ ಡ್ಯಾನ್ಸ್ ಮಾಡಿದ ಪರಿ ಕಂಡು ಎಲ್ಲರೂ ನಗುತ್ತಾ ಎಂಜಾಯ್ ಮಾಡಿದರು. ಈ ಮೂಲಕವಾದರೂ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ನಟನೆಯ ಸಿನಿಮಾದ ಹಾಡು ಕಿವಿಗೆ ಬೀಳುವಂತಾಗಿದೆ