ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ರಜತ್ ಬುಜ್ಜಿ ಅವರು ಸಕ್ಕತ್ತಾಗೆ ಆಟ ಆಡುತ್ತಿದ್ದಾರೆ. ಅವರ ಆಟದ ಶೈಲಿ, ಮಾತು ಪ್ರೇಕ್ಷಕರನ್ನು ರಂಜಿಸುತ್ತಿದೆ.
ಈ ಮಧ್ಯೆಯೇ ನಿನ್ನೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಈ ವೇಳೆ ಚೈತ್ರಾ ಕುಂದಾಪುರಗೆ ರಜತ್ ಖಡಕ್ ಟಾಂಗ್ ಕೊಟ್ಟಿದ್ದಾರೆ. ಒಬ್ಬೊಬ್ಬರ ಬಳಿ ಒಂದೊಂದು ರೀತಿಯ ಸ್ಟ್ರಾಟಜಿ ಬಳಸುತ್ತಿರುವ ರಜತ್ ಗೆಲ್ಲುವ ಉದ್ದೇಶವನ್ನಿಟ್ಟುಕೊಂಡೇ ಆಟ ಆಡುತ್ತಿದ್ದಾರೆ. ಮನೆಯವರ ಪ್ರತಿ ಮಾತಿಗೂ ಕೌಂಟರ್ ಕೊಡುತ್ತಿರುವ ರಜತ್ಗೆ ಎದುರು ಮಾತನಾಡಲು ಸಹ ಕೆಲ ಸದಸ್ಯರು ಹಿಂದೇಟು ಹಾಕುತ್ತಿದ್ದಾರೆ.
ನಿನ್ನೆ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮಹಾಪ್ರಭು ಉಗ್ರಂ ಮಂಜು ಮುಂದೆ ಮನೆಯ ಸದಸ್ಯರು ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. ನಾಮಿನೇಟ್ ಮಾಡುವಾಗ ಕಾರಣಗಳನ್ನು ನೀಡಿದ್ದು ಆ ಕಾರಣ ಉಗ್ರಂ ಮಂಜುಗೆ ಸೂಕ್ತ ಎನಿಸಿದಲ್ಲಿ ಮಾತ್ರವೇ ನಾಮಿನೇಷನ್ ಆಗಲಿದೆ, ಸೂಕ್ತ ಅಲ್ಲದಿದ್ದರೆ ಯಾರು ಕಾರಣ ನೀಡಿರುತ್ತಾರೆಯೋ ಅವರೇ ನಾಮಿನೇಟ್ ಆಗುತ್ತಾರೆ
ನಿನ್ನೆ ಚೈತ್ರಾ, ಮೊದಲಿಗೆ ರಜತ್ ಅವರನ್ನು ನಾಮಿನೇಟ್ ಮಾಡಲು ಮುಂದಾದರು. ರಜತ್, ನನ್ನನ್ನು ಬಾಸ್ ಎಂದು ಕರೆಯುತ್ತಾ ಗೇಲಿ ಮಾಡುತ್ತಾರೆ, ವ್ಯಂಗ್ಯ ಯಾವುದು? ಅವಮಾನ ಯಾವುದು ಗೊತ್ತಿಲ್ಲದಷ್ಟು ಮುಗ್ಧಳು ನಾನಲ್ಲ, ಮನೆಗೆ ಬಂದಾಗ ನಿಮಗೆಲ್ಲ ದರ್ಗಾದ ತಾಯತ ಕಟ್ಟಿಸುತ್ತೇನೆ ಎಂದೆಲ್ಲ ಹೇಳಿದರು’ ಇತ್ಯಾದಿ ಕಾರಣಗಳನ್ನು ಚೈತ್ರಾ ಕುಂದಾಪುರ ನೀಡಿದರು
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಜತ್, ನಾನು ಬಾಸ್ ಎಂದು ಗೌರವದಿಂದಲೇ ಕರೆಯುತ್ತೀನಿ ಎಂದರು. ನೀವು ಇಂಥಹಾ ಕ್ಷುಲ್ಲಕ ಕಾರಣ ನೀಡಿ ನನ್ನನ್ನು ನಾಮಿನೇಟ್ ಮಾಡುತ್ತಿದ್ದೀರಿ ಅದಕ್ಕೇ ನೀವು ನನಗೆ ಬಾಸ್, ನಾನು ಹೇಳದೇ ಇರುವುದನ್ನು ಹೇಳಿದ್ದೀನಿ ಅನ್ನುತ್ತಿದ್ದೀರಿ ಅದಕ್ಕೇ ನೀವು ನನ್ನ ಬಾಸ್ ಎಂದು ಮತ್ತಷ್ಟು ಗೇಲಿ ಮಾಡಿದರು. ‘ನಿಮ್ಮನ್ನು ಹೊರಗೆ ಕಳಿಸಿಯೇ ನಾನು ಮನೆಗೆ ಹೋಗುವುದು ಬಾಸ್’ ಎಂದು ರಜತ್ ಸವಾಲು ಹಾಕಿದರು.
ಆ ನಂತರ ಸಹ ಚೈತ್ರಾ ಹಾಗೂ ರಜತ್ ಜಗಳ ಮಾಡಿಕೊಂಡರು. ಯಾವುದೋ ಮಾತಿಗೆ ರಜತ್, ‘ಬಾಯ್ಮುಚ್ಕೊಂಡು ಕೂತ್ಕೊ’ ಎಂದರು, ಅದಕ್ಕೆ ಚೈತ್ರಾ ‘ನಾನು ಕೂತೇ ಇದ್ದೀನಿ, ನೀವೇ ಓಡಾಡುತ್ತಿರೋದು’ ಎಂದರು. ಆಗ ರಜತ್, ‘ಕೂತ್ಕೊಂಡು ಹರ್ಕೊಂತಿದ್ದೀಯ’ ಎಂದು ತುಸು ಅವಾಚ್ಯವಾಗಿಯೇ ಹೇಳಿದರು. ಅದಕ್ಕೆ ಚೈತ್ರಾ ‘ಇಂಥಹಾ ಮಾತುಗಳನ್ನು ಆಡಿದ್ದಕ್ಕೆ ನಿಮ್ಮನ್ನು ನಾಮಿನೇಟ್ ಮಾಡಿರೋದು’ ಎಂದರು.